Saturday, December 14, 2019 10:02 AM

ವಿಆರ್‍ಎಸ್ ಯೋಜನೆಗೆ ಉತ್ತಮ ಪ್ರತಿಕಿಯೆ
44
ವಿಆರ್‍ಎಸ್ ಯೋಜನೆಗೆ ಉತ್ತಮ ಪ್ರತಿಕಿಯೆ

ನವದೆಹಲಿ ನ.11 : ಕಳೆದ ವಾರ ಪ್ರಾರಂಭಿಸಲಾದ ವಿಆರ್‍ಎಸ್ ಯೋಜನೆಗೆ ಉತ್ತಮ ಪ್ರತಿಕಿಯೆ ವ್ಯಕ್ತವಾಗಿದ್ದು ಬಿಎಸ್‍ಎನ್‍ಎಲ್‍ನ 70,000 ಉದ್ಯೋಗಿಗಳು ಈಗಾಗಲೇ ಯೋಜನೆಗೆ ತಮ್ಮ ಆಯ್ಕೆಯನ್ನು ಸೂಚಿಸಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಟೆಲಿಕಾಂ ನಿಗಮದ ಅಧ್ಯಕ್ಷ ಮತ್ತು ಎಂಡಿ ಪಿ ಕೆ ಪುರ್ವಾರ್ ತಿಳಿಸಿದ್ದಾರೆ.
ಒಟ್ಟಾರೆಯಾಗಿ, ಸುಮಾರು ಒಂದು ಲಕ್ಷ ಬಿಎಸ್‍ಎನ್‍ಎಲ್ ಉದ್ಯೋಗಿಗಳು ಸ್ವಯಂಪ್ರೇರಿತ ನಿವೃತ್ತಿ ಯೋಜನೆಗೆ (ವಿಆರ್‍ಎಸ್) ಅರ್ಹರಾಗಿದ್ದಾರೆ. ಸಂಸ್ಥೆಯಲ್ಲಿ ಒಟ್ಟಾರೆ 1.50 ಲಕ್ಷ.ಉದ್ಯೋಗಿಗಳಿದ್ದಾರೆ.
ಬಿಎಸ್‍ಎನ್‍ಎಲ್ ಒಟ್ತಾರೆ 77,000 ಉದ್ಯೋಗಿಗಳಿಗಳಿಗೆ ವಿಆರ್‍ಎಸ್ ನಿಡಬೇಕೆಂದು ಆಂತರಿಕ ಗುರಿಹಾಕಿಕೊಂಡಿದ್ದು ಇದಕ್ಕಾಗಿ ಜನವರಿ 31, 2020 ದಿನವನ್ನು ಅಂತಿಮ ದಿನಾಂಕವಾಗಿ ಮಾಡಲಾಗಿದೆ.
“ವಿಆರ್‍ಎಸ್ ಆಯ್ಕೆ ಮಾಡಿಕೊಂಡಿರುವ ನೌಕರರ ಸಂಖ್ಯೆ ಇಲ್ಲಿಯವರೆಗೆ ಸುಮಾರು 70,000 ತಲುಪಿದೆ” ಎಂದು ಪುರ್ವಾರ್ ಪಿಟಿಐಗೆ ತಿಳಿಸಿದ್ದಾರೆ. ತನ್ನ ಸಿಬ್ಬಂದಿ ಬಲವನ್ನು ತಗ್ಗಿಸಲು ಸಜ್ಜಾಗಿರುವ ಸಂಸ್ಥೆ . ವಿಆರ್‍ಎಸ್
ಯೋಜನೆ ಪ್ರಾರಂಭವಾದ ನಂತರ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ದೂರವಾಣಿ ವಿನಿಮಯಕ್ಕೆ ಸಂಬಂಧಿಸಿದಂತೆ, ಸುಗಮ ಕಾರ್ಯಾಚರಣೆ ಮತ್ತು ವ್ಯವಹಾರ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತುರ್ತಾಗಿ ಕಾರ್ಯರೂಪಕ್ಕೆ ತರುವಂತೆ ಟೆಲಿಕಾಂ ಇಲಾಖೆಗೆ ಮನವಿ ಮಾಡಿದೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್