Tuesday, February 18, 2020 8:44 PM

ಸರ್ವಜ್ಞ ಪೀಠಾರೋಹಣಕ್ಕೆ ಉಡುಪಿ ಸಜ್ಜು
52
ಸರ್ವಜ್ಞ ಪೀಠಾರೋಹಣಕ್ಕೆ ಉಡುಪಿ ಸಜ್ಜು

ಉಡುಪಿ ಜ.16 : 250ನೇ ಪರ್ಯಾಯೋತ್ಸವ ಸಂದರ್ಭದಲ್ಲಿ ಅದಮಾರು ಮಠದ ಕಿರಿಯ ಶ್ರೀ ಈಶ ಪ್ರಿಯ ತೀರ್ಥ ಸ್ವಾಮಿ ಅವರು ಕೃಷ್ಣ ಮಠದಲ್ಲಿ ಪರ್ಯಾಯ ಸರ್ವಜ್ಞ ಪೀಠಾರೋಹಣಕ್ಕೆ ವೇದಿಕೆ ಸಜ್ಜುಗೊಂಡಿದೆ.
ಉಡುಪಿ ನಗರ ಸಂಪೂರ್ಣ ಅಲಂಕೃತಗೊಂಡು ಸಿದ್ದಗೊಂಡಿದ್ದು ಕೊನೆಯ ಹಂತದ ತಯಾರಿಗಳು ನಡೆಯುತ್ತಿವೆ ಎಂದು ಸ್ಥಳೀಯ ಶಾಸಕ ರಘುಪತಿ ಭಟ್ ಗುರುವಾರ ತಿಳಿಸಿದ್ದಾರೆ.
ಪರ್ಯಾಯ ಸರ್ವಜ್ಞ ಪೀಠಾರೋಹಣ ಆಯೋಜನೆಯ ಪೂರ್ಣ ಹೊಣೆಯನ್ನು ವಹಿಸಿಕೊಂಡಿರುವ ಶ್ರೀಕೃಷ್ಣಾ ಸೇವಾ ಬಳಗ ಸಾಕಷ್ಟು ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಲಕ್ಷಾಂತರ ಭಕ್ತಾದಿಗಳು ಉಡುಪಿಗೆ ಆಗಮಿಸುವ ನಿರೀಕ್ಷೆಯಿದ್ದು ಅವರಿಗೆ ಒದಗಿಸಲಾಗುವ ಮೂಲಭೂತ ಸೌಕರ್ಯಗಳ ಬಗ್ಗೆ ಸರಕಾರ ಮತ್ತು ಜಿಲ್ಲಾಡಳಿತದ ಮಟ್ಟದಲ್ಲಿ ಸಭೆಗಳಾಗಿವೆ ಎಂದು ವಿವರಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹದಿನೈದು ಜಾನಪದ ತಂಡಗಳು ಉಡುಪಿಗೆ ಬರಲಿದೆ. ವಿವಿಧ ಸರಕಾರಿ ಇಲಾಖೆಯಿಂದ ಸಾಮಾಜಿಕ, ಪೌರಾಣಿಕ ಹಾಗೂ ಐತಿಹಾಸಿ ಸಂದೇಶಗಳನ್ನು ಸಾರುವ ಆರು ಸ್ತಬ್ಧ ಚಿತ್ರ ಗಳು ಪರ್ಯಾಯ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ ಎಂದರು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್