Tuesday, February 18, 2020 10:31 PM

ಕೊಡಗಿನ 39,368 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆ : ಸಹಾಯಧನವನ್ನು ಸದುಪಯೋಗ ಪಡಿಸಿಕೊಳ್ಳಿ
97
ಕೊಡಗಿನ 39,368 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆ : ಸಹಾಯಧನವನ್ನು ಸದುಪಯೋಗ ಪಡಿಸಿಕೊಳ್ಳಿ

ಮಡಿಕೇರಿ ಜ.18 : ಕೊಡಗು ಜಿಲ್ಲೆ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಅತ್ಯಂತ ಸೂಕ್ತ ವಾತಾವರಣವನ್ನು ಹೊಂದಿದ್ದು, ಪ್ರಮುಖವಾಗಿ ಕಾಫಿ, ಏಲಕ್ಕಿ, ಕಾಳು ಮೆಣಸು, ಬಾಳೆ, ಅಡಿಕೆ, ತೆಂಗು, ಕಿತ್ತಳೆ ಹಾಗೂ ಇತರೆ ತೋಟದ ಹಣ್ಣಿನ ಬೆಳೆಗಳನ್ನು 39368 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ತೋಟಗಾರಿಕೆ ಇಲಾಖಾ ವತಿಯಿಂದ ರಾಷ್ಟೀಯ ತೋಟಗಾರಿಕೆ ಮಿಷನ್, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ, ತಾಳೆಬೆಳೆ ಅಭಿವೃದ್ಧಿ ಯೋಜನೆ, ತಾಳೆಬೆಳೆ ಅಭಿವೃದ್ಧಿ. ಸೂಕ್ಷ್ಮ ನೀರಾವರಿ ಯೋಜನೆ ಹಾಗೂ ಇತರೆ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಪ್ರಮುಖ ತೋಟಗಾರಿಕೆ ಬೆಳೆಗಳಾದ ಕಾಳು ಮೆಣಸು, ಕೊಡಗಿನ ಕಿತ್ತಳೆ, ತಾಳೆಬೆಳೆ. ಗೇರು ಬೆಳೆಗಳ ಪ್ರದೇಶ ವಿಸ್ತರಣೆ, ಪುನಶ್ವೇತನ ಕಾರ್ಯಕ್ರಮ. ಸೂಕ್ಷ್ಮ ನೀರಾವರಿ ಅಳವಡಿಕೆ. ಗ್ರೀನ್ ಹೌಸ್ ನಿರ್ಮಾಣ. ಕೋಯ್ಲೋತ್ತರ ನಿರ್ವಹಣೆ, ಜೇನುಗಾರಿಕೆ, ಸಮಗ್ರ ರೋಗ ನಿಯಂತ್ರಣ ಇತ್ಯಾದಿ ಕಾರ್ಯಕ್ರಮಗಳಿಗೆ ಸಹಾಯಧನವನ್ನು ನೀಡಲಾಗುವುದು.
2019-20ನೇ ಸಾಲಿನಲ್ಲಿ ತೋಟಗಾರಿಕೆ ಬೆಳೆ ಅಭಿವೃದ್ಧಿಗಾಗಿ ರೂ 316.83 ಲಕ್ಷ ಅನುದಾನದಲ್ಲಿ ವಿವಿಧ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತದೆ. ಇಲಾಖೆಯ ತೋಟಗಾರಿಕೆ ಕ್ಷೇತ್ರ ಮತ್ತು ನರ್ಸರಿಯಲ್ಲಿ 9,73,659 ಸಂಖ್ಯೆಯ ವಿವಿಧ ಗಿಡಗಳನ್ನು ಉತ್ಪಾದಿಸಿ ರೈತರಿಗೆ ಹಂಚಿಕೆ ಮಾಡಲಾಗುತ್ತಿದೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್