Monday, April 6, 2020 6:34 AM

ದೇಶದ್ರೋಹದ ವಿದ್ಯಾರ್ಥಿಗಳ ಬಿಡುಗಡೆ
64
ದೇಶದ್ರೋಹದ ವಿದ್ಯಾರ್ಥಿಗಳ ಬಿಡುಗಡೆ

ಬೆಂಗಳೂರು ಫೆ.16 : ದೇಶದ್ರೋಹದ ಹೇಳಿಕೆ ನೀಡಿ ಬಂಧನಕ್ಕೊಳಗಾಗಿದ್ದ ಹುಬ್ಬಳ್ಳಿ ವಿದ್ಯಾರ್ಥಿಗಳನ್ನು ಬಿಡುಗಡೆಗೊಳಿಸಿದ್ದಕ್ಕೆ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ ಹಾಗೂ ಯುಟಿ ಖಾದರ್ ಸರ್ಕಾರದ ನಿರ್ಧಾರಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.ಸರ್ಕಾರ, ಪೊಲೀಸ್ ಇಲಾಖೆ ವಿರುದ್ದ ಹರಿಹಾಯ್ದ ವಿಪಕ್ಷ ನಾಯಕ ಸಿದ್ದರಾಮಯ್ಯ,ಪೊಲೀಸರು ಮಾಡುತ್ತಿರುವುದು ಸರಿಯಿಲ್ಲ. ಪೊಲೀಸರು ಒಂದೊಂದು ಪ್ರಕರಣದಲ್ಲಿ ಒಂದೊಂದು ರೀತಿ ತಾರತಮ್ಯ ಮಾಡ್ತಿದ್ದಾರೆ ಪಾಕಿಸ್ತಾನ ಪರ ಘೋಷಣೆ ಕೂಗೋದು ನಿಜವಾದ ದೇಶದ್ರೋಹ.
ಆದರೆ ಪೊಲೀಸರು ಶಾಹಿನ್ ಶಾಲೆಯಂಥ ಪ್ರಕರಣದಲ್ಲಿ ಕೇಸ್ ಹಾಕ್ತಾರೆ. ಇಂಥವರನ್ನು ಬಿಟ್ಟು ಕಳಿಸ್ತಾರೆ. ಇದೆಲ್ಲ ಸರಿಯಿಲ್ಲ. ಹುಬ್ಬಳ್ಳಿ ಪ್ರಕರಣದ ಬಗ್ಗೆ ಇನ್ನಷ್ಟು ಮಾಹಿತಿ ಪಡೆದುಕೊಳ್ತೀನಿ. ಎಲ್ಲ ವಿಚಾರಗಳನ್ನು ಸದನದಲ್ಲಿ ಚರ್ಚೆ ಮಾಡ್ತೀನಿ ಎಂದು ಹೇಳಿದರು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್