Monday, April 6, 2020 6:15 AM

ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ‘ಪಿಂಗಾರ’ ಚಲನಚಿತ್ರ ಆಯ್ಕೆ
81
ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ‘ಪಿಂಗಾರ’ ಚಲನಚಿತ್ರ ಆಯ್ಕೆ

ಕುಶಾಲನಗರ ಫೆ. 18 : ಕೊಡಗು ಜಿಲ್ಲೆಯ ಉದಯೋನ್ಮುಖ ಕಿರುತೆರೆ ನಟಿ ಸಿಂಚನಾ ಪೊನ್ನವ್ವ ಪ್ರಮುಖ ಪಾತ್ರದಲ್ಲಿ ನಟಿಸಿದ `ಪಿಂಗಾರ’ ತುಳು ಮತ್ತು ಕನ್ನಡ ಭಾಷೆಯ ಚಲನಚಿತ್ರ 12ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಪ್ರೀತಂ ರಾಮಚಂದ್ರಶೆಟ್ಟಿ ನಿರ್ದೇಶನ, ಚಿತ್ರಕಥೆ, ಸಂಭಾಷಣೆ ಮತ್ತು ಅವಿನಾಶ್ ಶೆಟ್ಟಿ ನಿರ್ಮಾಪಕತ್ವದಲ್ಲಿ ನಿರ್ಮಾಣಗೊಂಡ ತುಳುನಾಡು ದೈವಕೋಲ, ಭಕ್ತಿ, ಸಂಸ್ಕøತಿ ಆಧಾರಿತ ಚಿತ್ರ ಇದಾಗಿದೆ.
ಕನ್ನಡ ಸಿನಿಮಾ ವಿಭಾಗದಲ್ಲಿ ಒಟ್ಟು 126 ಚಿತ್ರಗಳಲ್ಲಿ 14 ಚಿತ್ರಗಳು ಆಯ್ಕೆಯಾಗಿದ್ದು ಇದೇ ಪ್ರಥಮ ಬಾರಿಗೆ ತುಳು ಚಿತ್ರವೊಂದು ಚಲನಚಿತ್ರೋತ್ಸವದಲ್ಲಿ ಆಯ್ಕೆಯಾಗಿದೆ. ಇಂಡಿಯನ್ ಸಿನಿಮಾ ವಿಭಾಗದಲ್ಲಿ ಕೂಡ ಪಿಂಗಾರ ಆಯ್ಕೆಯಾಗಿದ್ದು 1200 ಚಿತ್ರಗಳಲ್ಲಿ ಆಯ್ಕೆಯಾದ 14 ಚಿತ್ರಗಳಲ್ಲಿ ಇದೊಂದಾಗಿದೆ ಎಂದು ನಿರ್ದೇಶಕರಾದ ಪ್ರೀತಂಶೆಟ್ಟಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ, ಕಾರ್ಕಳ ವ್ಯಾಪ್ತಿಯಲ್ಲಿ 12 ದಿನಗಳ ಕಾಲ ಚಿತ್ರೀಕರಣಗೊಂಡ ಪಿಂಗಾರ ಇನ್ನಷ್ಟೇ ಬಿಡುಗಡೆಗೊಳ್ಳಬೇಕಿದೆ. ಛಾಯಾಗ್ರಹಣ ವಿ.ಪವನ್ ಕುಮಾರ್ ಮಾಡಿದ್ದು ಚಿತ್ರದ ಮುಖ್ಯ ಪಾತ್ರದಲ್ಲಿ ಗುರುಪ್ರಸಾದ್ ಹೆಗ್ಗಡೆ, ಉಷಾ ಭಂಡಾರಿ, ನೀಮಾ ಸೇರಿದಂತೆ ಸಿಂಚನಾ ಪೊನ್ನವ್ವ ಮುಖ್ಯ ಪಾತ್ರಧಾರಿಗಳಾಗಿದ್ದಾರೆ. ಸಿಂಚನಾ ಚಿತ್ರದಲ್ಲಿ ವಸ್ತ್ರ ವಿನ್ಯಾಸಕಾರರಾಗಿ ಕೂಡ ಕೆಲಸ ನಿರ್ವಹಿಸಿದ್ದಾರೆ.
ಸಿಂಚನಾ ಕುಶಾಲನಗರದ ಹಿರಿಯ ಪತ್ರಕರ್ತರಾದ ವನಿತಾ, ಚಂದ್ರಮೋಹನ್ ದಂಪತಿಗಳ ಪುತ್ರಿಯಾಗಿದ್ದು ಪತ್ರಿಕೋದ್ಯಮ ಪದವಿ ನಂತರ ಟಿವಿ ಮಾಧ್ಯಮದಲ್ಲಿ ವಾರ್ತಾ ನಿರೂಪಕಿಯಾಗಿ ನಂತರ ಶಾಂತಂ ಪಾಪಂ, ಕಣ್ಮಣಿ, ನನ್ ಹೆಂಡ್ತಿ ಎಂಬಿಬಿಎಸ್, ರಕ್ಷಾಬಂಧನ ಧಾರವಾಹಿಗಳಲ್ಲಿ ನಟಿಸಿದ್ದು ಅವಲಕ್ಕಿ ಪವಲಕ್ಕಿ, ಗಿಲ್ಕಿ ಕನ್ನಡ ಚಲನಚಿತ್ರದಲ್ಲಿ ನಟಿಸಿದ್ದಾರೆ. ಇದಲ್ಲದೆ ವಿಟೂ ಲಾಂಛನದಡಿ ದಕ್ಷಿಣ ಭಾರತದ ವಿವಿಧೆಡೆ ಕಾರ್ಯಕ್ರಮ ಸಂಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್