Monday, April 6, 2020 6:28 AM

ವನ್ಯಜೀವಿಗಳನ್ನು ರಕ್ಷಿಸಲು ಪ್ರಧಾನಿ ಕರೆ
40
ವನ್ಯಜೀವಿಗಳನ್ನು ರಕ್ಷಿಸಲು ಪ್ರಧಾನಿ ಕರೆ

ನವದೆಹಲಿ ಫೆ.17 : ವನ್ಯಜೀವಿ ಮತ್ತು ಆವಾಸಸ್ಥಾನಗಳ ಸಂರಕ್ಷಣೆ, ಭಾರತದ ಸಾಂಸ್ಕೃತಿಕ ನೀತಿಗಳಲ್ಲಿ ಒಂದು ಭಾಗವಾಗಿದ್ದು ಅದು ಸಹಾನುಭೂತಿ ಮತ್ತು ಸಹಬಾಳ್ವೆಯನ್ನು ಕಲಿಸುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಹಲವಾರು ವರ್ಷಗಳಿಂದ ವನ್ಯಜೀವಿಗಳು ಮತ್ತು ಆವಾಸಸ್ಥಾನಗಳು ನಮ್ಮ ಸಾಂಸ್ಕೃತಿಕ ನೀತಿಗಳ ಭಾಗವಾಗಿ ಬಿಟ್ಟಿದೆ. ಪ್ರಕೃತಿ, ವನ್ಯಜೀವಿಗಳು ನಮ್ಮಲ್ಲಿ ಸಹಬಾಳ್ವೆ, ಸಹಾನುಭೂತಿಗಳನ್ನು ಕಲಿಸುತ್ತದೆ ಎಂದು ಪಿಎಂ ಮೋದಿ ವಿಡಿಯೊ ಕಾನ್ಫರೆನ್ಸ್ ಮೂಲಕ ವಲಸೆ ಪ್ರಭೇದಗಳ ಕುರಿತ ವಿಶ್ವಸಂಸ್ಥೆಯ ಸಮಾವೇಶ ಉದ್ದೇಶಿಸಿ ಮಾತನಾಡುವಾಗ ಹೇಳಿದರು.
ನಮ್ಮ ವೇದ, ಉಪನಿಷತ್ತುಗಳಲ್ಲಿ ಕಾಡುಪ್ರಾಣಿಗಳ ಸಂರಕ್ಷಣೆ ಬಗ್ಗೆ ಹೇಳಿದ್ದಾರೆ. ಮೌರ್ಯ ಸಾಮ್ರಾಜ್ಯದ ಮಹಾನ್ ದೊರೆ ಅಶೋಕ ಅರಣ್ಯ ನಾಶ ಮತ್ತು ಪ್ರಾಣಿಗಳನ್ನು ಕೊಲ್ಲಬಾರದು ಎಂದು ಹೇಳುತ್ತಿದ್ದರು. ಭಾರತ ದೇಶ ಹಲವು ಜೈವಿಕ ಜೀವಿಗಳ ಆವಾಸಸ್ಥಾನವಾಗಿದೆ. ಇಲ್ಲಿ 4 ಜೀವ ವೈವಿಧ್ಯ ಕೇಂದ್ರಗಳಿವೆ. ವಿಶ್ವದ ಶೇಕಡಾ 2.4ರಷ್ಟು ಭೂ ಪ್ರದೇಶಗಳಲ್ಲಿ ಜೀವ ವೈವಿಧ್ಯತೆಯಿದ್ದು ಅವುಗಳಲ್ಲಿ ಶೇಕಡಾ 8ರಷ್ಟು ಕೊಡುಗೆ ಭಾರತದ್ದಾಗಿದೆ ಎಂದರು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್