Monday, April 6, 2020 6:19 AM

ಫೆ. 21 ರಂದು ಕುಶಾಲನಗರದಲ್ಲಿ ಕೊಡಗ್‍ರ ಸಿಪಾಯ್ ಚಲನಚಿತ್ರದ 101 ನೇ ಪ್ರದರ್ಶನ
125
ಫೆ. 21 ರಂದು ಕುಶಾಲನಗರದಲ್ಲಿ ಕೊಡಗ್‍ರ ಸಿಪಾಯ್ ಚಲನಚಿತ್ರದ 101 ನೇ ಪ್ರದರ್ಶನ

ಮಡಿಕೇರಿ,ಫೆ.18: ಜಿಲ್ಲೆಯ ವಿವಿಧೆಡೆ ಇದುವರೆಗೂ 100 ಪ್ರದರ್ಶನ ಕಂಡಿರುವ ಕೊಡಗ್‍ರ ಸಿಪಾಯ್ ಚಲನಚಿತ್ರದ 101 ನೇ ಪ್ರದರ್ಶನ ಮಹಾಶಿವರಾತ್ರಿ ದಿನವಾದ ಫೆ. 21 ರಂದು ಸಂಜೆ 4 ಗಂಟೆಗೆ ಕುಶಾಲನಗರದ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಲಿದೆ ಎಂದು ಕುಶಾಲನಗರ ಕೊಡವ ಸಮಾಜದ ಅಧ್ಯಕ್ಷ ಅಂಜಪರವಂಡ ರಘು ನಂಜಪ್ಪ, ಚಲನಚಿತ್ರ ವಿತರಕ ಜಾನ್ ಪುಲಿಕಲ್ ಹಾಗೂ ನಟ, ನಿರ್ಮಾಪಕ ಹಾಗೂ ಚಿತ್ರ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ತಿಳಿಸಿದ್ದಾರೆ. ಹೆಚ್ಚಿನ ಜನ ವೀಕ್ಷಿಸಲು ಬಯಸಿದ್ದಲ್ಲಿ ಮತ್ತೋಂದು ಪ್ರದರ್ಶನ ಏರ್ಪಡಿಸುದಾಗಿ ಚಿತ್ರ ತಂಡದ ಪರವಾಗಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ ಅಯ್ಯಪ್ಪ ತಿಳಿಸಿದ್ದಾರೆ. ಕೂರ್ಗ್ ಕಾಫಿವುಡ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಕೊಟ್ಟುಕತ್ತೀರ ಪ್ರಕಾಶ್ ನಿರ್ದೇಶನದ ಚಿತ್ರ ಇದಾಗಿದೆ. ಹೆಚ್ಚಿನ ಮಾಹಿತಿಗೆ ಕೆ.ಎ ರಘು 9972396463, ಜಾನ್ 9141808495 ಹಾಗೂ ಕೆ.ಕೆ ಪ್ರಕಾಶ್ 9845226709 ಸಂಪರ್ಕಿಸಬಹುದಾಗಿದೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್