Monday, April 6, 2020 7:42 AM

ರಕ್ಷಿತ್ ಶೆಟ್ಟಿ ಯುಬಿ ರಾಯಭಾರಿ
88
ರಕ್ಷಿತ್ ಶೆಟ್ಟಿ ಯುಬಿ ರಾಯಭಾರಿ

ಮಡಿಕೇರಿ ಫೆ. 18 : ಯುಬಿ ಎಕ್ಸ್‍ಪೋರ್ಟ್ ರಾಯಭಾರಿಯಾಗಿ ಕನ್ನಡದ ಸೂಪರ್‍ಸ್ಟಾರ್ ರಕ್ಷಿತ್ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ.
ನಟನೆ, ನಿರ್ದೇಶಕ, ಚಿತ್ರಕಥೆ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿರುವ ಬಹುಮುಖ ಪ್ರತಿಭೆಯ ರಕ್ಷಿತ್ ಶೆಟ್ಟಿಯವರು ಬಹುಮುಖಿ ಬ್ರಾಂಡ್ ಪ್ರಚುರಪಡಿಸಲು ಅತ್ಯಂತ ಸೂಕ್ತ ರಾಯಭಾರಿ ಎಂದು ಯುನೈಟೆಡ್ ಬ್ರೆವರೀಸ್ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಗುರುಪ್ರೀತ್ ಸಿಂಗ್ ಪ್ರಕಟಣೆಯಲ್ಲಿ ಹೇಳಿದ್ದಾರೆ. ರಕ್ಷಿತ್ ಶೆಟ್ಟಿ ಹಾಗೂ ಯುಬಿ ಬ್ರಾಂಡ್ ಎರಡೂ ಕರ್ನಾಟಕದ ಅತಿದೊಡ್ಡ ತಾರೆಗಳು ಎಂದು ಅವರು ಬಣ್ಣಿಸಿದ್ದಾರೆ.
ಬ್ರಾಂಡ್‍ನ ಪ್ರಚಾರ ರಾಯಭಾರಿಯಾಗಿ ಯುಬಿ ಜತೆ ಗುರುತಿಸಿಕೊಳ್ಳಲು ಅತೀವ ಸಂತಸವಾಗುತ್ತಿದೆ. ಈ ಶಕ್ತಿಶಾಲಿ ಬ್ರಾಂಡ್ ಜತೆ ಬೆಳೆಯಲು ಮತ್ತು ಗ್ರಾಹಕರ ಜತೆ ಸಂಬಂಧ ಸಾಧಿಸಲು ಇದು ಅಪೂರ್ವ ಅವಕಾಶ ಎಂದು ರಕ್ಷಿತ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್