Monday, April 6, 2020 6:52 AM

ವಿರಾಜಪೇಟೆಯಲ್ಲಿ ಜಿಲ್ಲಾ ಕಾರ್ಮಿಕರ ಸಮ್ಮೇಳನ
74
ವಿರಾಜಪೇಟೆಯಲ್ಲಿ ಜಿಲ್ಲಾ ಕಾರ್ಮಿಕರ ಸಮ್ಮೇಳನ

ವಿರಾಜಪೇಟೆ, ಫೆ.18: ಕಾರ್ಮಿಕರಿಗಾಗಿ ಅನೇಕ ಯೋಜನೆಗಳಿದ್ದರೂ ಸರಕಾರ ಅದನ್ನು ಜಾರಿಗೆ ತಂದಿಲ್ಲ ಆದರಿಂದ ಕಾರ್ಮಿಕರುಗಳು ಒಂದಾಗಿ ಸೌಲಭ್ಯಗಳಿಗಾಗಿ ಹೋರಾಟ ನಡೆಸಬೇಕಾಗಿದೆ ಎಂದು ಕಾರ್ಮಿಕ ಸಂಘಟನೆಯ ರಾಜ್ಯ ಕಾರ್ಯದರ್ಶಿ ಕ್ಲಿಪ್ಟನ್ ಡಿ.ರೊಜಾರಿಯೊ ಹೇಳಿದರು.
ಎ.ಐ.ಸಿ.ಸಿ.ಟಿ.ಯು ಇಂಡಿಯಾ ಸೆಂಟರ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ ವತಿಯಿಂದ ವಿರಾಜಪೇಟೆಯ ಪುರಭವನದಲ್ಲಿ ಆಯೋಜಿಸಲಾಗಿದ್ದ ”ಜಿಲ್ಲಾ ಕಾರ್ಮಿಕರ ಸಮ್ಮೇಳನ”ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕ್ಲಿಪ್ಟನ್ ರೋಜಾರಿಯೊ ಅವರು ಕಾರ್ಮಿಕರನ್ನುದ್ದೇಶಿಸಿ ಎಲ್ಲಾ ಕಾಮೀಕರುಗಳು ಆದಾರ್ ಕಾರ್ಡ್ ಮತ್ತು ಮತದಾನದ ಗುರುತಿನ ಚೀಟಿಯನ್ನು ಪಡೆದುಕೊಂಡು ಸರಕಾರದ ಸೌಲಭ್ಯ ಪಡೆದುಕೊಳ್ಳಲು ಮುಂದಾಗಬೇಕು. ಕಾರ್ಮಿಕರಿಗೆ ಸಿಗುವ ಸೌಲಭ್ಯಗಳಿಗಾಗಿ ಅಧಿಕಾರಿಗಳೊಂದಿಗೆ ಹಲವುಬಾರಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ, ಆದರಿಂದ ಸರಕಾರ ಕಟ್ಟಡ ಕಾರ್ಮೀಕರಿಗೆ ಮತ್ತು ಕಾಫಿ ಪ್ಲಾಂಟೇಷನ್ ಕೆಲಸ ಮಾಡುವ ಕಾರ್ಮೀಕರಿಗೆ ಕನಿಷ್ಟ ವೇತನ ನಿಗಧಿಪಡಿಸಬೇಕು ಹಾಗೂ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕು. ಎಲ್ಲಾ ಕೃಷಿ ಕಾರ್ಮಿಕರ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರಲ್ಲದೆ ಚುನಾವಣೆ ಸಂದರ್ಭ ಮತ ಕೇಳಲು ಕಾರ್ಮೀಕರ ಮನೆ ಭಾಗಿಲಿಗೆ ಬರುವ ಜನಪ್ರತಿನಿಧಿಗಳು ಮತ್ತು ಸರಕಾರ ನಂತರದ ದಿನಗಳಲ್ಲಿ ಕಾರ್ಮಿಕರನ್ನು ಮರೆತು ಬಿಡುತ್ತಾರೆ ಈ ಕಾರಣದಿಂದ ಕಾರ್ಮಿಕರು ಜಾಗೃತರಾಗಬೇಕು ಎಂದರು.
ಮತ್ತೊರ್ವ ಅತಿಥಿ ಎಐಸಿಸಿಟಿಯು ನ ರಾಜ್ಯ ಕಾರ್ಯದರ್ಶಿ ಅಪ್ಪಣ್ಣ ಅವರು ಮಾತನಾಡಿ ಕೇಂದ್ರ ಸರಕಾರ ಕಾರ್ಮಿಕರಿಗಾಗಿ ಇರುವ ಕಾನೂನು ಜಾರಿಗೆ ತರುವುದನ್ನು ಬಿಟ್ಟು ಕಾರ್ಮಿಕರ ಕಾಯ್ದೆಯನ್ನು ಕಿತ್ತು ಒಗೆದಿದೆ. ನಾವು ನಮ್ಮ ಹಕ್ಕು ಪಡೆಯಲು ಸಂಘಟಿತರಾಗಬೇಕು. ಕಾರ್ಮಿಕರ ಮಕ್ಕಳು ಕಾರ್ಮಿಕರಾಗಿಯೇ ಉಳಿಯದೆ ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗೇರುವಂತಾಗಬೇಕು. ಲೈನ್ ಮನೆಯಲ್ಲಿ ವಾಸವಿರುವ ಕಾರ್ಮಿಕರನ್ನು ಗುರುತಿಸಿ ಸರಕಾರ ಅವರಿಗೆ ಜೀತಪದ್ಧತಿಯನ್ನು ಹೋಗಲಾಡಿಸಿ ಬಡ ಕುಟುಂಬಗಳಿಗೆ ಮನೆ ನಿವೇಶನ ನೀಡುವಂತಾಗಬೇಕು ಎಂದು ಸರಕಾರವನ್ನು ಆಗ್ರಹಿಸಿದರು.
ಕಾರ್ಮಿಕ ಸಮ್ಮೇಳನದ ಅಧ್ಯಕ್ಷತೆಯನ್ನು ಕಟ್ಟಡ ಕಾರ್ಮಿಕ ಸಂಘದ ಮುಖಂಡ ಎಂ.ಕೆ.ಮೋಹನ್ ವಹಿಸಿ ಮಾತನಾಡಿ ಕಾರ್ಮಿಕರುಗಳು ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದೆಬರಬೇಕು ಎಂದರು.
ಸಂಘಟನೆಯ ಕೋಲಾರ ಜಿಲ್ಲಾ ಅಧ್ಯಕ್ಷ ಪ್ರಭು ಅವರು ಮಾತನಾಡಿ ಯಾವುದೇ ಕೆಲಸಗಳಾಗಲಿ ಕೂಲಿ ಪಡೆದುಕೊಳ್ಳುವ ಎಲ್ಲರೂ ಕಾರ್ಮಿಕರೇ ನಮ್ಮ ಬೇಡಿಕೆಗಳಿಗಾಗಿ ಸಂಘಟನೆಯ ಮೂಲಕ ಹೋರಾಟ ಅನಿವಾರ್ಯ ಎಂದರು.
ಸಭೆಯ ನಂತರ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಿ ಬೇಡಿಕೆಗಳನ್ನು ಮುಂದಿಡಲಾಯಿತು. ಸಮ್ಮೇಳನದಲ್ಲಿ ವಿರಾಜಪೇಟೆ ತಾಲೂಕಿನ ಕೆದಮುಳ್ಳೂರು, ಕಾನೂರು, ಮಾಯಮುಡಿ ಹಾಗೂ ಇತರೆಡೆಗಳಿಂದ ಕಾರ್ಮಿಕರುಗಳು ಭಾಗವಹಿಸಿದ್ದರು.

ವೋಟ್ ಪೋಲ್

Previous polls

ಸುಭಾಷಿತ

ಜಾಹಿರಾತುಗಳು

ಫಿಲಂವುಡ್