ನೆನೆಗುದಿಗೆ ಬಿದ್ದ ಮಡಿಕೇರಿ ಸ್ಕ್ವೇರ್ ಕಾಮಗಾರಿ

01/05/2020

ಮಡಿಕೇರಿ ಮೇ 1 : ಕೊಡಗಿನಲ್ಲಿ 2018 ರಲ್ಲಿ ಸುರಿದ ಮಹಾಮಳೆಗೆ ಮಡಿಕೇರಿ ನಗರದ ಹಳೇ ಖಾಸಗಿ ಬಸ್ ನಿಲ್ದಾಣದ ಬೃಹತ್ ಬರೆ ಕುಸಿದ ಪ್ರದೇಶದಲ್ಲಿ “ಮಡಿಕೇರಿ ಸ್ಕ್ವೇರ್” ಎಂಬ ಕಲ್ಪನೆಯೊಂದಿಗೆ ಪ್ರವಾಸಿಗರ ಆಕರ್ಷಣೀಯ ತಾಣವನ್ನು ನಿರ್ಮಿಸುವ ಯೋಜನೆಯನ್ನು ರೂಪಿಸಲಾಯಿತು.
ಕೋಟಿ ರೂ.ಗೂ ಹೆಚ್ಚು ಹಣವನ್ನು ಮೀಸಲಿಟ್ಟು ಅಡಿಪಾಯ ಹಾಕುವ ಕಾರ್ಯವನ್ನು ಕೂಡ ನಡೆಸಲಾಯಿತು. ಆದರೆ ಕಳೆದ ಒಂದೂವರೆ ವರ್ಷದಿಂದ ಕಾಮಗಾರಿ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.