ಬಸ್ ಸಂಚಾರವಿಲ್ಲದೆ ಗ್ರಾಮೀಣ ಜನರ ಪರದಾಟ

01/05/2020

ಮಡಿಕೇರಿ ಮೇ 1 : ಕೊಡಗು ಜಿಲ್ಲೆಯಲ್ಲಿ ಕೊರೋನಾ ಲಾಕ್ ಡೌನ್ ವಿನಾಯಿತಿ ದೊರೆತ್ತಿದ್ದರೂ ಬಸ್ ಗಳ ಸಂಚಾರವಿಲ್ಲದೆ ಗ್ರಾಮೀಣ ಜನರು ಪರದಾಡುತ್ತಿದ್ದಾರೆ.
ಬಹುತೇಕ ಎಲ್ಲಾ ಸರ್ಕಾರಿ ಕಚೇರಿಗಳು ಹಾಗೂ ಅಂಗಡಿ, ಮುಗ್ಗಟ್ಟುಗಳು ವಾರದ ನಾಲ್ಕು ದಿನ ತೆರೆದುಕೊಂಡರೂ ಪಟ್ಟಣ ಪ್ರದೇಶಕ್ಕೆ ಬರಲು ಸಾರಿಗೆ ವ್ಯವಸ್ಥೆಯಿಲ್ಲದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಟ್ಟ, ಗುಡ್ಡಗಳಿಂದ ಕೂಡಿರುವ ಜಿಲ್ಲೆಯಲ್ಲಿ ಗ್ರಾಮಗಳ ಸಂಖ್ಯೆಯೇ ಹೆಚ್ಚಾಗಿದ್ದು, ಪ್ರಯಾಣಕ್ಕಾಗಿ ಖಾಸಗಿ ಬಸ್ ಗಳನ್ನೇ ಗ್ರಾಮಸ್ಥರು ಅವಲಂಬಿಸಿದ್ದರು.