ಶುಭ ಸಮಾರಂಭಗಳಿಲ್ಲದೆ ಅಡುಗೆಯವರಿಗೆ ಕೆಲಸವಿಲ್ಲ
01/05/2020

ಮಡಿಕೇರಿ ಮೇ 1 : ವಿಶಿಷ್ಟವಾದ ಆಚಾರ, ವಿಚಾರ, ಸಂಸ್ಕøತಿಯನ್ನು ಹೊಂದಿರುವ ಕೊಡಗು ಜಿಲ್ಲೆಯಲ್ಲಿ ಶುಭ ಸಮಾರಂಭಗಳಿಗೆ ಕೊರತೆ ಇಲ್ಲ. ಆದರೆ ಕೊರೋನಾ ಲಾಕ್ ಡೌನ್ ನಿಂದಾಗಿ ಯಾವುದೇ ಶುಭ ಕಾರ್ಯಗಳು ನಡೆಯದೆ ಇರುವುದರಿಂದ ಅಡುಗೆ ಮಾಡುವ ವೃತ್ತಿಯ ಮಂದಿ ಜೀವನ ಸಾಗಿಸುವುದು ಹೇಗೆ ಎನ್ನುವ ದು:ಖದಲ್ಲಿ ಮುಳುಗಿದ್ದಾರೆ. ಕೊಡಗಿನಲ್ಲಿ ಸಾಮಾನ್ಯವಾಗಿ ಜನವರಿಯಿಂದ ಮೇ ತಿಂಗಳ ಅಂತ್ಯದವರೆಗೆ ಎಡೆಬಿಡದೆ ವಿವಾಹ ಸಮಾರಂಭಗಳು ನಡೆಯುತ್ತವೆ. ಗ್ರಾಮ, ಗ್ರಾಮಗಳಲ್ಲಿ ಊರ ಹಬ್ಬಗಳು ನಡೆಯುತ್ತವೆ. ಆದರೆ ಈಗ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ.