ಹೊಟೇಲ್ ಉದ್ಯಮಗಳ ವ್ಯವಹಾರ ಮುಗಿದ ಅಧ್ಯಾಯ

01/05/2020

ಮಡಿಕೇರಿ ಮೇ 1 : ಪ್ರವಾಸಿಗರನ್ನೇ ನಂಬಿಕೊಂಡು ಕೋಟಿಗಟ್ಟಲೆ ಹಣ ಸುರಿದು ಆರಂಭಿಸಿದ ಹೊಟೇಲ್ ಉದ್ಯಮಗಳ ವ್ಯವಹಾರ ಮುಗಿದ ಅಧ್ಯಾಯವೆಂದು ಕೊಡಗು ಹೊಟೇಲ್ ಉದ್ಯಮ ಮತ್ತು ರೆಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಬೇಸರ ವ್ಯಕ್ತಪಡಿಸಿದ್ದಾರೆ.
ಕೊರೋನಾ ಲಾಕ್ ಡೌನ್ ಸಡಿಲಿಕೆಯಾಗಿದ್ದರೂ ವರ್ಷದ ಕೊನೆಯವರೆಗೂ ಪ್ರವಾಸಿಗರ ಆಗಮನ ಸಾಧ್ಯವಿಲ್ಲದೆ ಇರುವುದರಿಂದ ಈ ವರ್ಷ ಹೊಟೇಲ್ ಉದ್ಯಮ ಸಂಪೂರ್ಣವಾಗಿ ನಷ್ಟವನ್ನು ಅನುಭವಿಸಲಿದೆ ಎಂದು ಹೇಳಿದ್ದಾರೆ.