ಡಾ.ಬಿ.ಆರ್.ಅಂಬೇಡ್ಕರ್ ಅಭಿಮಾನಿಗಳ ಸಂಘದಿಂದ ನೆರವು

01/05/2020

ಮಡಿಕೇರಿ ಮೇ 1 : ಕೊಡ್ಲಿಪೇಟೆಯ ಡಾ.ಬಿ.ಆರ್.ಅಂಬೇಡ್ಕರ್ ಅಭಿಮಾನಿಗಳ ಸಂಘದ ವತಿಯಿಂದ ಸ್ಥಳೀಯ ಹಾಡಿಗಳ ಬುಡಕಟ್ಟು ಜನರಿಗೆ ನಿತ್ಯ ಬಳಕೆಯ ಆಹಾರ ಮತ್ತು ಇನ್ನಿತರ ವಸ್ತುಗಳ ಕಿಟ್ ನ್ನು ವಿತರಿಸಲಾಯಿತು.
ಬೆಂಬಳೂರು, ಕೆಲಕೊಡ್ಲಿ, ನವಗ್ರಾಮ ಮತ್ತು ಶಿವಪುರ ಗ್ರಾಮ ವ್ಯಾಪ್ತಿಯ ಅಸಹಾಯಕ ಬುಡಕಟ್ಟು ಕುಟುಂಬಗಳು, ವಿಕಲಚೇತನರು ಹಾಗೂ ವಯೋವೃದ್ಧರಿಗೆ ಅಭಿಮಾನಿಗಳ ಸಂಘ ನೆರವು ನೀಡಿತು. ಮುಂದಿನ ದಿನಗಳಲ್ಲಿ ದುರ್ಬಲರಿಗೆ ಮತ್ತಷ್ಟು ನೆರವು ನೀಡಲಾಗುವುದು ಎಂದು ಸಂಘದ ಪ್ರಮುಖರಾದ ಜೆ.ಎಲ್.ಜನಾರ್ಧನ್ ತಿಳಿಸಿದರು.
ಸೋಮಣ್ಣ, ವೀರಭದ್ರ, ಇಂದ್ರೇಶ್, ಕಾಳಯ್ಯ ಮಾಸ್ಟರ್, ಡಿ.ಬಿ.ವಿಜಯ್, ಡಿ.ಎಸ್.ವಸಂತ, ಹೇಮಂತ್, ಮೇಘರಾಜ್, ವಿಜಯ್, ಲಂಕೇಶ್ ಮತ್ತಿತರರು ಹಾಜರಿದ್ದರು.