ಹಲಸಿನ ಹಣ್ಣಿನ ಆಸೆಗೆ ತೋಟಗಳಲ್ಲೇ ಬೀಡುಬಿಟ್ಟ ಕಾಡಾನೆಗಳು
01/05/2020

ಮಡಿಕೇರಿ ಮೇ 1 : ಈಗ ಕೊಡಗಿನಲ್ಲಿ ರುಚಿಕರವಾದ ಹಲಸಿನ ಹಣ್ಣು ಸಿಗುವ ಕಾಲ. ಕಾಫಿ ತೋಟಗಳಲ್ಲಿ ಹಲಸಿನ ಮರಗಳನ್ನು ಕೂಡ ಬೆಳೆಸಿರುವುದರಿಂದ ಹಣ್ಣನ್ನು ಹುಡುಕಿಕೊಂಡು ಬರುತ್ತಿರುವ ಹಲಸು ಪ್ರಿಯ ಕಾಡಾನೆಗಳು ದಾಳಿ ಇಡುತ್ತಿವೆ. ಕಾಫಿ ಗಿಡಗಳು ನಾಶವಾಗುತ್ತಿರುವುದಲ್ಲದೆ ಕಾರ್ಮಿಕರು ತೋಟದಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಕೆಲವು ಆನೆಗಳು ತೋಟಗಳಲ್ಲೇ ಮರಿಗಳಿಗೆ ಜನ್ಮ ನೀಡಿ ಕದಲದೆ ಅರಣ್ಯ ಅಧಿಕಾರಿಗಳಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿವೆ. ಸಿದ್ದಾಪುರ ಭಾಗದಲ್ಲಿ ಕಾಡಾನೆಗಳು ತೋಟ ಬಿಟ್ಟು ತೆರಳುತ್ತಿಲ್ಲ.