ಶಾಲಾ ಶುಲ್ಕವನ್ನು ಕಂತುಗಳ ರೂಪದಲ್ಲಿ ಪಾವತಿಸಬಹುದು
01/05/2020

ಮಡಿಕೇರಿ ಮೇ 1 : ಕೊರೋನಾ ಲಾಕ್ ಡೌನ್ ಸಂಕಷ್ಟದಿಂದ ಎಲ್ಲಾ ವರ್ಗದ ಜನ ಆರ್ಥಿಕ ಹಿನ್ನಡೆಯನ್ನು ಅನುಭವಿಸುತ್ತಿದ್ದಾರೆ. ಈ ನಡುವೆ ಶಾಲಾ ಶುಲ್ಕವನ್ನು ಪಾವತಿಸಲು ಶಾಲೆಗಳಿಂದ ಸೂಚನೆ ಕೂಡ ಬಂದಿದ್ದು, ಪೋಷಕರು ಕಂತುಗಳ ರೂಪದಲ್ಲಿ ಶುಲ್ಕವನ್ನು ಪಾವತಿಸಬಹುದೆಂದು ಶಿಕ್ಷಣ ಇಲಾಖೆ ತಿಳಿಸಿದೆ.
ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಕಂತಿನಲ್ಲಿ ಪಾವತಸಿಬಹುದು ಅಥವಾ ಒಂದೇ ಕಂತಿನಲ್ಲಿ ನೀಡಲೂ ಅವಕಾಶವಿದೆ. 2020- 21 ಸಾಲಿಗೆ ಶಾಲಾ ಶುಲ್ಕವನ್ನು ಏರಿಕೆ ಮಾಡುವಂತ್ತಿಲ್ಲವೆಂದು ಶಿಕ್ಷಣ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.