ಸೌಂದರ್ಯವನ್ನು ಹೆಚ್ಚಿಸಿಕೊಂಡ ಮಡಿಕೇರಿ ರಾಜಾಸೀಟು ಉದ್ಯಾನವನ

01/05/2020

ಮಡಿಕೇರಿ ಮೇ 1 : ಕೊಡಗಿಗೆ ಆಗಮಿಸುವ ಪ್ರವಾಸಿಗರ ಸ್ವರ್ಗವೆಂದೇ ಹೆಸರುವಾಸಿಯಾಗಿರುವ ಮಂಜಿನ ನಗರಿ ಮಡಿಕೇರಿಯ ರಾಜಾಸೀಟು ಉದ್ಯಾನವನ ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಂಡಿದೆ. ಕೊರೋನಾ ಲಾಕ್ ಡೌನ್ ನಿಂದ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದ್ದರೂ ಪ್ರವಾಸಿತಾಣದ ಕಳೆ ಗುಂದಿಲ್ಲ. ವಾಹನ ಸಂಚಾರವಿಲ್ಲದೆ ಮಾಲಿನ್ಯ ರಹಿತ ವಾತಾವರಣ ಮತ್ತು ಉದ್ಯಾನವದೊಳಗೆ ಜನ ಸಂಚಾರ ಇಲ್ಲದೆ ಇರುವುದರಿಂದ ಪುಷ್ಪರಾಶಿಗಳು ಹಾಗೂ ಹಸಿರು ಹುಲ್ಲು ಕಂಗೊಳಿಸುತ್ತಿದೆ. ಒಂದು ವಾರದಿಂದ ಸುರಿಯುತ್ತಿರುವ ಮಳೆ ಕೂಡ ರಾಜಾಸೀಟನ್ನು ಹಸಿರಾಗಿಸಿದೆ.