ಮಾಸ್ಕ್, ಸ್ಯಾನಿಟೈಸರ್ ವಿತರಣೆ

01/05/2020

ಮಡಿಕೇರಿ ಮೇ 1 : ನಗರದ ಮಹಾದೇವಪೇಟೆಯ ಅಲಿಮಾ ಕಾಂಪಲೆಕ್ಸ್, ಕಾವೇರಿ ಗ್ರೂಪ್ ಕಾಂಪ್ಲೆಕ್ಸ್, ಪೆನಷನ್ ಲೈನ್, ಗೌಳಿಬಿದಿ, ದೇಚೂರುನಲ್ಲಿರುವ ಗಾರೆಕೆಲಸ, ತೋಟದ ಕೆಲಸ ಮತ್ತು ಹೋಟೆಲ್ ಕೆಲಸದ ಕಾರ್ಮಿಕರಿಗೆ ನಗರಸಭೆಯಿಂದ ಕಿಟ್ ವಿತರಿಸಲಾಯಿತು.
ಜೊತೆಗೆ ಕಾರ್ಮಿಕರು ಮತ್ತು ಕುಶಾಲನಗರದ ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾ ವೇದಿಕೆಯವರಿಗೆ ಮಾಸ್ಕ್ ಮತ್ತು ಹ್ಯಾಂಡ್‍ವಾಶ್, ಸೋಪ್‍ಗಳನ್ನು ಕಾರ್ಮಿಕ ಇಲಾಖೆಯಿಂದ ವಿತರಿಸಲಾಯಿತು ಎಂದು ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎಂ ಯತ್ನಟ್ಟಿ ಅವರು ತಿಳಿಸಿದ್ದಾರೆ. ಈ ಸಂದರ್ಭ ನಗರಸಭೆಯ ಸಿಬ್ಬಂದಿ ಬಶೀರ್ ಇತರರು ಹಾಜರಿದ್ದರು.