ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿಗೆ ಎರಡು ಹಸುಗಳು ಬಲಿ
01/05/2020

ಮಡಿಕೇರಿ ಮೇ 1 : ದಕ್ಷಿಣಕೊಡಗಿನಲ್ಲಿ ಒಂದೇ ದಿನ ಎರಡು ಕಡೆ ಹುಲಿ ದಾಳಿ ಮಾಡಿದ್ದು, ಎರಡು ಹಸುಗಳನ್ನು ಕೊಂದು ಹಾಕಿದೆ.
ಕುಮಟೂರು ಗ್ರಾಮದ ಮಾಚಿರ ಮುತ್ತಮ್ಮ ಎಂಬುವವರ ಹಸು ಹುಲಿದಾಳಿಗೆ ಬಲಿಯಾಗಿದೆ. ಈ ಮೊದಲು ಇದೇ ಹಸುವಿನ ಕರುವನ್ನು ಹುಲಿ ದಾಳಿನಡೆಸಿ ಕೊಂದು ಹಾಕಿತ್ತು.
ಅದೇ ಊರಿನ ಕೊಟ್ರಂಗಡ ಎಂ. ಸುಗುಣ ಚಿನ್ನಪ್ಪನವರ ಹಸುವನ್ನು ಕೂಡ ಹುಲಿ ದಾಳಿ ನಡೆಸಿ ಕೊಂದು ಹಾಕಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ.