ಚೆಟ್ಟಳ್ಳಿಯಲ್ಲಿ ಫಲಾನುಭವಿಗಳಿಗೆ ಕೋಳಿಮರಿ ವಿತರಣೆ

01/05/2020

ಮಡಿಕೇರಿ ಮೇ 1 : ಜಿಲ್ಲಾ ಪಂಚಾಯತ್ ಹಾಗೂ ಪಶುವೈದಕೀಯ ಇಲಾಖೆಯ ಜಂಟಿ ಆಶ್ರಯದಲ್ಲಿ ಚೆಟ್ಟಳ್ಳಿ ಪಶುವೈದಕೀಯ ಆಸ್ಪತ್ರೆಯಲ್ಲಿ ಫಲಾನುಭವಿಗಳಿಗೆ ಕೋಳಿಮರಿ ವಿತರಿಸಲಾಯಿತು.

ಜಿ.ಪಂ ಸದಸ್ಯೆ ಸುನಿತಾ ಮಂಜುನಾಥ್ ಅವರು ಸಾಮಾನ್ಯ ವರ್ಗ ಮತ್ತು ಪರಿಶಿಷ್ಟ ಜಾತಿ, ಪಂಗಡದ ಅರ್ಹ ಗ್ರಾಮಸ್ಥರಿಗೆ ಕೋಳಿಮರಿಗಳನ್ನು ಉಚಿತವಾಗಿ ನೀಡಿದರು.

ಸೋಮವಾರಪೇಟೆ ಪಶುಪಾಲನಾ ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಎಸ್.ವಿ.ಬಾದಾಮಿ, ಚೆಟ್ಟಳ್ಳಿ ವೈದ್ಯ ಡಾ.ಸಂಜೀವಕುಮಾರ್ ಆರ್.ಶಿಂಧೆ, ಸಿಬ್ಬಂದಿ ಮೋಸಸ್ ಮತ್ತಿತರರು ಹಾಜರಿದ್ದರು.