ಮಕ್ಕಂದೂರು ಕೊಡವ ಸಮಾಜದಿಂದ ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ 10 ಸಾವಿರ ರೂ. ದೇಣಿಗೆ

01/05/2020

ಮಡಿಕೇರಿ ಮೇ 1 : ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮಕ್ಕಂದೂರು ಕೊಡವ ಸಮಾಜದಿಂದ ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ 10 ಸಾವಿರ ರೂ. ಗಳನ್ನು ದೇಣಿಗೆ ನೀಡಿದೆ. ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೋನಾ ವೈರಸ್ ಸಂಕಷ್ಟ ಭಾರತ ದೇಶವನ್ನು ಕೂಡ ಇಕ್ಕಟ್ಟಿಗೆ ಸಿಲುಕಿಸಿದ್ದು, ಪ್ರತಿಯೊಬ್ಬರೂ ನೆರವಿನ ಹಸ್ತ ಚಾಚುವ ಅಗತ್ಯವಿದೆ ಎಂದು ಕೊಡವ ಸಮಾಜದ ಅಧ್ಯಕ್ಷ ನಾಪಂಡ ರವಿಕಾಳಪ್ಪ ತಿಳಿಸಿದ್ದಾರೆ.