ನಮ್ಮ ಕೊಡಗು ತಂಡದಿಂದ ಕೊರೋನಾ ವಾರಿಯರ್ಸ್ ಗೆ ಮಾಸ್ಕ್ ವಿತರಣೆ

01/05/2020

ಮಡಿಕೇರಿ ಮೇ 1 : ಕೋವಿಡ್ -19 ಸೋಂಕಿನಿಂದಾಗಿ ಪ್ರಪಂಚದ ಹಲವು ರಾಷ್ಟ್ರಗಳು ಸೇರಿದಂತೆ ನಮ್ಮ ದೇಶಕ್ಕೆ ದೇಶವೇ ತತ್ತರಿಸಿ ಹೋಗಿರುವಂತಹ ಈ ಸಂದರ್ಭದಲ್ಲಿ ದೇಶದ ಹಿತದೃಷ್ಟಿಯಿಂದ ಕಾರ್ಯ ನಿರ್ವಹಿಸುತ್ತಿರುವ ಕೊರೋನಾ ವಾರಿಯರ್ಸ್ ಎನಿಸಿಕೊಂಡ ಆರಕ್ಷಕ ಸಿಬ್ಬಂದಿಗಳು, ವೈದ್ಯ ಸಿಬ್ಬಂದಿಗಳು, ಹಾಗೂ ಆಶಾಕಾರ್ಯಕರ್ತರ ರಕ್ಷಣೆಗಾಗಿ ನಮ್ಮ ಕೊಡಗು ತಂಡದ ವತಿಯಿಂದ ಮಾಸ್ಕ್ ವಿತರಿಸಲಾಯಿತು.

ಈ ಸಂದರ್ಭ ತಂಡದ ಅಧ್ಯಕ್ಷ ನೌಶಾದ್ ಜನ್ನತ್ತ್, ಪದಾಧಿಕಾರಿಗಳಾದ ಬಿ.ಬಿ.ಲೋಹಿತ್, ಬಶೀರ್, ಗಿರೀಶ್, ರೋಷನ್ ಭಾಗವಹಿಸಿದ್ದರು.