ಪೋಕ್ಸೋ ಪ್ರಕರಣ : ಆರೋಪಿಗೆ 20 ವರ್ಷ ಶಿಕ್ಷೆ

May 1, 2020

ಮಡಿಕೇರಿ ಮೇ 1 : ದಿನಾಂಕ 12-3-2019 ರಂದು ಕೇರಳ ರಾಜ್ಯದ ಮಾನಂದವಾಡಿಯ ನಿವಾಸಿ ಸಿ.ಡಿ. ನಿತಿನ್ ಎಂಬವರು ಕೊಡಗು ಜಿಲ್ಲೆಯ ಪುಲಿಯೇರಿ ಗ್ರಾಮಕ್ಕೆ ತನ್ನ ಪತ್ನಿಯ ತವರು ಮನೆಗೆ ಬಂದಿದ್ದ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿಯೋರ್ವಳ ಮೇಲೆ ಅತ್ಯಾಚಾರ ಎಸಗಿರುವ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪ್ರಕರಣದ ತನಿಖೆಯನ್ನು ಆಗಿನ ಸಿ.ಪಿ.ಐ. ಕೆ.ಎನ್. ನಾಗೇಗೌಡ ಅವರು ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣ ವರದಿಯನ್ನು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ನಡೆಸಿದ ನ್ಯಾಯಧೀಶರಾದ ಬಿ.ಜಿ.ರಮಾ ಅವರು ಆರೋಪಿ ಸಿ.ಡಿ. ನಿತಿನ್ ಗೆ 20 ವರ್ಷಗಳ ಜೈಲು ಶಿಕ್ಷೆಯನ್ನು ಹಾಗೂ 96 ಸಾವಿರ ರೂ. ದಂಡ ವಿಧಿಸಿದೆ.
ಈ ಪ್ರಕರಣದಲ್ಲಿ ಸರಕಾರಿ ಅಭಿ ಯೋಜಕ ಡಿ.ನಾರಾಯಣ ವಾದವನ್ನು ಸಮರ್ಪಕವಾಗಿ ಮಂಡಿಸಿ ಆರೋಪಿಗೆ ಶಿಕ್ಷೆಯಾಗಲು ಯಶಸ್ವಿಯಾಗಿದ್ದು ಇವರಿಗೆ ಅಭಿ ನಂದನೆಯನ್ನು ಸಲ್ಲಿಸಿದೆ. ಈ ಪ್ರಕರಣದ ತನಿಖೆಯನ್ನು ಕೈಗೊಂಡ ತನಿಖಾಧಿಕಾರಿ ಕೆ.ಎನ್. ನಾಗೇಗೌಡ (ಹಿಂದಿನ ಸಿ.ಪಿ.ಐ. ಮಡಿಕೇರಿ ನಗರ ವೃತ್ತ) ಇವರ ಉತ್ತಮ ರೀತಿಯ ತನಿಖೆಯನ್ನು ಶ್ಲಾಘಿಸಲಾಗಿದೆ.

error: Content is protected !!