13 ವರ್ಷಗಳಿಂದ ಹಾಸಿಗೆ ಹಿಡಿದಿರುವ ಕೂಲಿ ಕಾರ್ಮಿಕ ವಿಠಲ್
01/05/2020

ಮಡಿಕೇರಿ ಮೇ 1 : ಕೂಲಿ ಕಾರ್ಮಿಕರ ಜೀವನಕ್ಕೆ ಭದ್ರತೆ ಇಲ್ಲ ಎನ್ನುವುದಕ್ಕೆ ಕಳೆದ 13 ವರ್ಷಗಳಿಂದ ಹಾಸಿಗೆ ಹಿಡಿದಿರುವ ವಿರಾಜಪೇಟೆ ತಾಲೂಕಿನ ಹಂಚಿತಿಟ್ಟು ಗ್ರಾಮದ ಕಾರ್ಮಿಕ ವಿಠಲ ಸಾಕ್ಷಿಯಾಗಿದ್ದಾರೆ.
ಮರದಿಂದ ಬಿದ್ದು ಸೊಂಟ ಮುರಿದುಕೊಂಡ ಇವರು ಮತ್ತೆ ಮೇಲೇಳಲೇ ಇಲ್ಲ. ನಡೆಯಲಾಗದ ಇವರಿಗೆ ಬಡ ತಾಯಿಯೇ ಇಲ್ಲ. ನಡೆಯಲಾಗದ ಇವರಿಗೆ ಬಡ ತಾಯಿಯೇ ಆಸರೆ. ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲು ಇವರ ಬಳಿ ಹಣವಿಲ್ಲ. ವಯಸ್ಸಾದ ತಾಯಿಯೇ ಕೂಲಿ ಕೆಲಸ ಮಾಡಿ ವಿಠಲನನ್ನು ಸಾಕಬೇಕಾಗಿದೆ.
ಸದ್ಯ ವಿಠಲ್ ಅವರ ಮನೆಗೆ ಮಾಲ್ದಾರೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶೃಂಗ ಶ್ರೀ ಹಾಗೂ ಆರೋಗ್ಯ ನೀರಿಕ್ಷಕ ಸುದರ್ಶನ್ ಭೇಟಿ ನೀಡಿ ವಿಠಲ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು.