ಇದು ನಿಜವಾದ ಮಾನವೀಯತೆ

01/05/2020

ಮಡಿಕೇರಿ ಮೇ 1 : ಸಮಾಜಸೇವೆ ಮಾಡುವವರಿಗೆ ಬಡವರ ಬಗ್ಗೆ ಕಾಳಜಿ, ಕರುಣೆ, ಸೇವಾ ಕಾರ್ಯದಲ್ಲಿ ಆಸಕ್ತಿ, ಸಹನೆ, ತಾಳ್ಮೆ, ಸಾರ್ವಜನಿಕ ಒಡನಾಟ ಹಾಗೂ ಮಾನವೀಯತೆ ಇರಬೇಕಾಗುತ್ತದೆ. ಇವೆಲ್ಲವನ್ನೂಧಾರಾಳವಾಗಿ ಮೈಗೂಡಿಸಿಕೊಂಡಿರುವ ವ್ಯಕ್ತಿ ಮಡಿಕೇರಿಯ ಮಹಮ್ಮದ್ ತಣಲ್.
ಕಳೆದ ಅನೇಕ ವರ್ಷಗಳಿಂದ ಸಾರ್ವಜನಿಕ ಸೇವಾಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು, ಸಮಾಜದ ಬಡವರ, ಅಂಗವಿಕಲರ, ದೀನದಲಿತರ, ವಯೋವೃದ್ಧರ ಹಾಗೂ ನೊಂದವರ ಪಾಲಿನ ಬಂಧುವಾಗಿ,ಜಮಾತೇ ಇಸ್ಲಾಮಿ ಸಂಘಟನೆಯ ನಿಷ್ಠಾವಂತ ಕಾರ್ಯಕರ್ತನಾಗಿ ತಮ್ಮ ಸೇವಾಕಾರ್ಯದಲ್ಲಿ ಜನಮನ ಗೆದ್ದವರು. ಶ್ರೀಯುತರು ಪ್ರತಿವರ್ಷವೂ ಹಸಿದವರ ಹೊಟ್ಟೆ ತುಂಬಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಬರುತ್ತಿದ್ದಾರೆ.
ಜೊತೆಗೆ ಮಡಿಕೇರಿಯ ತ್ಯಾಗರಾಜನಗರದಲ್ಲಿ ರುವ ತಣಲ್ ಎಂಬ ವೃದ್ಧಾಶ್ರಮದ ಮೇಲ್ನೋಟದ ಜವಾಬ್ದಾರಿಯನ್ನೂ ವಹಿಸಿಕೊಂಡಿರುತ್ತಾರೆ.ಹೀಗಾಗಿ ಇವರು ಮಹಮದ್ ತಣಲ್ ಎಂದೇ ಜನ ವಲಯದಲ್ಲಿ ಗುರುತಿಸಲ್ಪಟ್ಟಿದ್ದಾರೆ.
ಮಾರಕ ವೈರಸ್ ಕೊರೊನಾ ಭೀತಿಯಿಂದಾಗಿ ಜನರು ಗೃಹ ಬಂಧನಕ್ಕೊಳಗಾಗಿರುವ,ಈ ಸಂದರ್ಭದಲ್ಲಿ ಮಹಮದ್ ತಣಲ್ ಅವರು ತಮ್ಮ ಸಹ ಕಾರ್ಯಕರ್ತರೊಂದಿಗೆ ಸೇರಿಕೊಂಡು ಸಮಾಜದ ವಿವಿಧ ಜನಾಂಗದಲ್ಲಿರುವ 150ಕ್ಕೂ ಅಧಿಕ ಬಡವರನ್ನು ಗುರುತಿಸಿ ಅಕ್ಕಿ, ಬೇಳೆ, ಎಣ್ಣೆ, ಸಕ್ಕರೆ ಮುಂತಾದ ನಿತ್ಯೋಪಯೋಗಿ ಬಳಕೆಯ ಆಹಾರದ ಕಿಟ್ ಗಳನ್ನು ವಿತರಿಸುವ ಮೂಲಕ ಅವರುಗಳ ಹಸಿವನ್ನು ತಣಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಒಕ್ಕೂಟದ ಹೆಮ್ಮೆ

ಇವರು ಮಾನವೀಯ ಸ್ನೇಹಿತರ ಒಕ್ಕೂಟದ ಓರ್ವ ನಿಷ್ಠಾವಂತ ಸದಸ್ಯರಾಗಿ ರುವುದು ನಮ್ಮ ಒಕ್ಕೂಟಕ್ಕೆ ಒಂದು ಹೆಮ್ಮೆಯ ವಿಚಾರ. ಇಹ ಪರ ವಿಜಯವನ್ನು ತಂದುಕೊಡುವ ಮಹಮದ್ ತಣಲ್ ಅವರ ಈ ಸೇವಾಕಾರ್ಯ ಸದಾ ಮುಂದುವರಿಯಲಿ ಎಂದು ಒಕ್ಕೂಟವು ಹಾರೈಸುವುದರೊಂದಿಗೆ ನಮ್ಮ ಒಕ್ಕೂಟದ ಸದಸ್ಯರುಗಳು ಕೂಡ ಇವರ ಸೇವಾ ಕಾರ್ಯವನ್ನು ಶ್ಲಾಘಿಸುವ ಮೂಲಕ ಅವರಿಗೆ ಪೆÇ್ರೀತ್ಸಾಹ ನೀಡುವಂತೆ ಕೋರಿ ಕೊಳ್ಳುತ್ತದೆ.
ಮಹಮ್ಮದ್ ತಣಲ್ ಅವರಿಗೆ ಮಾನವೀಯ ಸ್ನೇಹಿತರ ಒಕ್ಕೂಟದ ಅಭಿನಂದನೆಗಳು.
ಬರಹ : ಎಂ. ಇ. ಮಹಮದ್