ಮಡಿಕೇರಿ ರಕ್ಷಣಾ ವೇದಿಕೆಯಿಂದ ಕಾರ್ಮಿಕ ದಿನಾಚರಣೆ

01/05/2020

ಮಡಿಕೇರಿ ಮೇ 1 : ಮಡಿಕೇರಿ ರಕ್ಷಣಾ ವೇದಿಕೆಯ Koims ಹೊರ ಗುತ್ತಿಗೆ ನೌಕರರು ಇಂದು ಮಡಿಕೇರಿ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಕೇಕ್ ಕತ್ತರಿಸಿ ಅಂತರಾಷ್ಟ್ರೀಯ ಕಾಮಿ೯ಕರ ದಿನಚಾರಣೆಯನ್ನು ಆಚರಿಸಿದರು.
ವೇದಿಕೆಯ ಜಿಲ್ಲಾಧ್ಯಕ್ಷ ಪವನ್ ಪೆಮ್ಮಯ್ಯ ಅವರ ನೇತೃತ್ವದಲ್ಲಿ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಸರಳ ರೀತಿಯಲ್ಲಿ ಆಚರಿಸಿದ ಕಾಯ೯ಕ್ರಮದಲ್ಲಿ ಮಡಿಕೇರಿ ರಕ್ಷಣಾ ವೇದಿಕೆಯ ಮಹಿಳಾ ಘಟಕ ಮತ್ತು ವಿದ್ಯಾಥಿ೯ ಘಟಕದ ಸದಸ್ಯರು ಭಾಗವಹಿಸಿದ್ದರು .