ಮಡಿಕೇರಿ ರಕ್ಷಣಾ ವೇದಿಕೆ ಕಾರ್ಯಕ್ಕೆ ಶ್ಲಾಘನೆ
01/05/2020

ಮಡಿಕೇರಿ ಮೇ 1 : ವಕೀಲ ಪವನ್ ಪೆಮ್ಮಯ್ಯಾವರ ನೇತೃತ್ವದಲ್ಲಿ ಮುನ್ನಡೆಯುತ್ತಿರುವ
ಮಡಿಕೇರಿ ರಕ್ಷಣಾ ವೇದಿಕೆಯ ಕಾರ್ಯ ವೈಖರಿಯನ್ನು ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಶ್ಲಾಘಿಸಿದ್ದಾರೆ. ನಗರದ ಕೊಡವ ಸಮಾಜದ ಆವರಣದಲ್ಲಿ ರಕ್ಷಣಾ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ಹಾಗೂ ಹಿರಿಯ ಮತ್ತು ಕಿರಿಯ ಸದಸ್ಯರೊಂದಿಗೆ ಚರ್ಚಿಸಿದರು. ವೇದಿಕೆಯ ಸಾಮಾಜಿಕ ಕಳಕಳಿಗೆ ಪ್ರೋತ್ಸಾಹ ನೀಡುವುದಾಗಿ ಭರವಸೆ ನೀಡಿದರು.