ಮಡಿಕೇರಿ ನಗರ ವರ್ಕ್‍ಶಾಪ್ ಕಾರ್ಮಿಕರ ಸಂಘದಿಂದ ನೆರವು
02/05/2020

ಮಡಿಕೇರಿ ಮೇ 2 : ಮಡಿಕೇರಿ ನಗರ ವರ್ಕ್‍ಶಾಪ್ ಕಾರ್ಮಿಕರ ಸಂಘ ತನ್ನ ಸದಸ್ಯರಿಗೆ ಆರ್ಥಿಕ ನೆರವು ನೀಡುವ ಮೂಲಕ ಕಾರ್ಮಿಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿತು.
ನಗರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರುಗಳಿಗೆ ತಲಾ ಎರಡು ಸಾವಿರ ರೂಪಾಯಿಗಳು ವಿತರಿಸಲಾಯಿತು. ಕೊರೋನಾ ಲಾಕ್ ಡೌನ್ ನಿಂದ ಕಳೆದ ಒಂದೂವರೆ ತಿಂಗಳಿನಿಂದ ಕೆಲಸವಿಲ್ಲದೆ ವರ್ಕ್‍ಶಾಪ್ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ ಎಂದು ಸಂಘದ ಅಧ್ಯಕ್ಷ ಪಿ.ರಮೇಶ್ ಬೇಸರ ವ್ಯಕ್ತಪಡಿಸಿದರು. ಪದಾಧಿಕಾರಿಗಳು ಸದಸ್ಯರು ಈ ಸಂದರ್ಭ ಹಾಜರಿದ್ದರು.