ಕಿಕ್ಕರಲ್ಲಿ ಮತ್ತು ಮಂಕ್ಯ ಗ್ರಾಮಸ್ಥರಿಗೆ ಕಿಟ್ ವಿತರಣೆ

02/05/2020

ಮಡಿಕೇರಿ ಮೇ 2 : ಸೋಮವಾರಪೇಟೆಯ ಕಿಕ್ಕರಳ್ಳಿ ಮತ್ತು ಮಂಕ್ಯ ಗ್ರಾಮವು ನಗರದಿಂದ ಸುಮಾರು ಮೂವತ್ತು ಕಿಲೋಮೀಟರ್ ದೂರ ಇದ್ದು, ಇದು ಬೆಟ್ಟ ಗುಡ್ಡದಿಂದ ಕೂಡಿದ ಕುಗ್ರಾಮ ಪ್ರದೇಶವಾಗಿದೆ.
ಈ ಗ್ರಾಮಕ್ಕೆ ದಿನಕ್ಕೆ ಎರಡು ಬಾರಿ ಬಸ್ ಬಂದು ಹೋಗುತ್ತಿದ್ದು, ಈಗ ಕರೋನ ವೈರಸ್ ಕಾರಣ ಲಾಕ್ ಡೌನ್ ಅದಲ್ಲಿಂದ ಅಲ್ಲಿನ ಜನರು ತೀರಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೊದಲೇ ಆರ್ಥಿಕವಾಗಿ ಹಿಂದುಳಿದರಿಂದ ಅವರಿಗೆ ವಾಹನದ ವ್ಯವಸ್ಥೆ ಇಲ್ಲದ ಕಾರಣ ಕಾಲು ದಾರಿ ಒಂದೇ ಮಾರ್ಗೋಪಾಯವಾಗಿದೆ.
ಇದನ್ನು ಮನಗಂಡು ಮಡಿಕೇರಿಯ ಕೊಡಗು ಸೇವಾ ಕೇಂದ್ರವು ಕಿಕ್ಕರಳ್ಳಿ, ಮತ್ತು ಮಂಕ್ಯ ಗ್ರಾಮಕ್ಕೆ ತೆರಳಿ ಅಲ್ಲಿನ ನಲವತ್ತ ನಾಲಕ್ಕು ಕುಟುಂಬಗಳಿಗೆ ದಿನಸಿ ಪದಾರ್ಥಗಳನ್ನು ವಿತರಿಸಿದರು.
ಕೊಡಗು ಸೇವಾಕೇಂದ್ರದ ಸಂಚಾಲಕರಾದ ಪ್ರಮೋದ್ ಸೋಮಯ್ಯ ತೇಲಪಂಡ ಅವರು ಮಾತನಾಡಿ, ಗ್ರಾಮವು ತೀರ ಹಿಂದುಳಿದಿದ್ದು ಗ್ರಾಮದ ಯುವಕರು ಕೆಲಸವನ್ನು ಅವಲಂಬಿಸಿ ಬೆಂಗಳೂರು ಸೇರಿದ್ದರು. ಈಗ ಸಂಭವಿಸಿದ ಅತಂತ್ರ ಪರಿಸ್ಥಿತಿಯಿಂದ ಇನ್ನು ನಗರಗಳಲ್ಲಿ ಕೆಲಸವೂ ಇಲ್ಲದೆ ಇಲ್ಲಿ ಬದುಕಲಿಕ್ಕೂ ದಾರಿಕಾಣದೆ ಬದುಕು ದುಸ್ತರವಾಗಲಿದೆ. ಆದುದರಿಂದ ಸರಕಾರವು ಇತ್ತ ಗಮನ ಹರಿಸಿ ಇಲ್ಲಿನ ಯುವಕ ಯುವತಿಯರಿಗೆ ಶಾಶ್ವತ ವಾಗಿ ಉದ್ಯೋಗ ಕಲ್ಪಿಸಬೇಕೆಂದರು.
ಕೊಡಗು ಸೇವಾಕೇಂದ್ರದ ಪದಾಧಿಕಾರಿಗಳಾದ ಅಜ್ಜಿನಂ ಡ ತಮ್ಮು ಪೂವಯ್ಯ, ಬಿದ್ದಾಟಂಡ ತಮ್ಮಯ್ಯ, ಪುತ್ತರಿರ ಪಪ್ಪು ತಿಮ್ಮಯ್ಯ, ಮಂದ ಪಂಡ ಸತೀಶ್ ಅಪ್ಪಚ್ಚು, ವನಾಂಡ ಮದನ್ ಮುಂತಾದವರು ಹಾಜರಿದ್ದರು.