ಗುಂಡಿಕ್ಕಿಕೊಂಡು ವೃದ್ಧೆ ಆತ್ಮಹತ್ಯೆ : ಹೈಸೊಡ್ಲೂರು ಗ್ರಾಮದಲ್ಲಿ ಘಟನೆ

02/05/2020

ಮಡಿಕೇರಿ ಮೇ 2 : ವೃದ್ಧೆಯೊಬ್ಬರು ಗುಂಡಿಕ್ಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಕ್ಷಿಣ ಕೊಡಗಿನ ಹೈಸೊಡ್ಲೂರು ಗಾಮದಲ್ಲಿ ನಡೆದಿದೆ.
ಹೈಸೊಡ್ಲೂರು ಗ್ರಾಮದ ಕಾಫಿ ಬೆಳೆಗಾರ ದಿ.ಬಯವಂಡ ಪಿ. ಲಕ್ಷ್ಮಣ ಎಂಬವರ ಪತ್ನಿ ತಾರಾ ಲಕ್ಷ್ಮಣ(71) ಎಂಬವರೆ ಸಾವನ್ನಪ್ಪಿರುವ ದುರ್ದೈವಿ.
ಶನಿವಾರ ಬೆಳಗ್ಗೆ ತಾರಾ ಲಕ್ಷ್ಮಣ್ ಅವರು ತಮ್ಮ ಮನೆಯಲ್ಲಿ ಗುಂಡಿಕ್ಕಿಕೊಂಡು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.