ಹಾಡ ಹಗಲೇ 5.18 ಲಕ್ಷ ರೂ. ದರೋಡೆ : ಸುಂಟಿಕೊಪ್ಪದಲ್ಲಿ ಘಟನೆ

02/05/2020

ಮಡಿಕೇರಿ ಮೇ 2 : ಕಾರ್ಮಿಕರಿಗೆ ವೇತನ ನೀಡಲೆಂದು ಬ್ಯಾಂಕ್ ನಿಂದ ಹಣ ತೆಗೆದುಕೊಂಡು ಹೋಗುತ್ತಿದ್ದ ತೋಟದ ವ್ಯವಸ್ಥಾಪಕರೊಬ್ಬರ ಮೇಲೆ ಹಲ್ಲೆ ನಡೆಸಿ 5.18 ಲಕ್ಷ ರೂ.ಗಳನ್ನು ಹಾಡಹಗಲೇ ಚೋರರು ಕದ್ದೊಯ್ದಿರುವ ಘಟನೆ ಸುಂಟಿಕೊಪ್ಪ ಸಮೀಪದ ಹರದೂರು ಗ್ರಾಮದಲ್ಲಿ ನಡೆದಿದೆ.
ತೋಟದ ವ್ಯವಸ್ಥಾಪಕ ವಿಜಯಕುಮಾರ್ ಎಂಬುವವರು ಸುಂಟಿಕೊಪ್ಪ ಬ್ಯಾಂಕಿನಿಂದ ಕಾರ್ಮಿಕರಿಗೆ ವೇತನ ನೀಡಲು ಹಣ ತೆಗೆದುಕೊಂಡು ಹೋಗುತ್ತಿದ್ದಾಗ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಹಿಂಬದಿಯಿಂದ ಬಂದ ದುಷ್ಕರ್ಮಿಗಳಿಬ್ಬರು ವಿಜಯಕುಮಾರ್ ತಲೆಗೆ ಕಬ್ಬಿಣದ ರಾಡ್ ನಿಂದ ಹೊಡೆದು ಹಣವಿದ್ದ ಕೈ ಚೀಲವನ್ನು ಹೊತ್ತೊಯ್ದಿದ್ದಾರೆ.
ಹೆಲ್ಮೆಟ್ ಧರಿಸಿದ್ದರಿಂದ ತಲೆಗೆ ಹೆಚ್ಚಿನ ಘಾಸಿಯಾಗಿಲ್ಲ್ಲ ಎನ್ನಲಾಗಿದೆ. ಗಾಯಗೊಂಡಿರುವ ವಿಜಯ ಕುಮಾರ್ ಅವರನ್ನು ಸುಂಟಿಕೊಪ್ಪ ಸರ್ಕಾರಿ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಸುಂಟಿಕೊಪ್ಪದ ಕೆನಾರ ಬ್ಯಾಂಕಿನಿಂದ ಶನಿವಾರ ಬೆಳಿಗ್ಗೆ ಹರದೂರು ಗುಂಡುಕುಟ್ಟಿ ತೋಟದ ಮಾಲೀಕರಾದ ದಿವಂಗತ ಜಿ.ಎಂ.ಮಹೇಂದ್ರ ಅವರ ಎಸ್ಟೇಟಿನ ವ್ಯವಸ್ಥಾಪಕರಾದ ವಿಜಯಕುಮಾರ್ ಅವರು 5 ಲಕ್ಷದ 18 ಸಾವಿರ ನಗದನ್ನು ಡ್ರಾ ಮಾಡಿಕೊಂಡು ಕ್ಯಾನಟಿಕ್ ಹೊಂಡ ಸ್ಕೂಟಿ ವಾಹನದಲ್ಲಿ ವಾಪಾಸ್ಸು ತೋಟಕ್ಕೆ ತೆರಳುತ್ತಿದ್ದಾಗ ಸುಂಟಿಕೊಪ್ಪ ಮಾದಾಪುರ ರಸ್ತೆಯ ಪ್ರಧಾನ ವ್ಯವಸ್ಥಾಪಕರಾದ ಕರ್ನಲ್ ಕುಮಾರ್ ತೋಟಕ್ಕೆ ತೆರಳುವ ಗೇಟಿನ ಮುಂಭಾಗದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ದ್ವಿಚಕ್ರ ವಾಹನವನ್ನು ನಿಲ್ಲಿಸಿಕೊಂಡು ನಿಂತಿದ್ದರು ಎನ್ನಲಾಗಿದೆ. ಇದೇ ಅಲ್ಲಿಗೆ ಆಗಮಿಸಿದ ವಿಜಯಕುಮಾರ್ ಅವರ ಬಳಿ ಕರ್ನಲ್ ಕುಮಾರ್ ಅವರನ್ನು ಭೇಟಿಯಾಗಲು ಬಂದಿರುವುದಾಗಿ ಅವರ ಮನೆಯನ್ನು ತೋರಿಸಿಕೊಡುವಿರ ಎಂದು ಕೇಳಿದ್ದರು ಎನ್ನಲಾಗಿದೆ. ವ್ಯವಸ್ಥಾಪಪಕ À ವಿಜಯ್‍ಕುಮಾರ್ ನನ್ನ ಹಿಂದೆ ಬರುವಂತೆ ಸೂಚಿಸಿ ಬೈಕಿನಲ್ಲಿ ಅವರ ತೋಟಕ್ಕೆ ಸಾಗುತ್ತಿರುವುದಾಗಿ ತಿಳಿಸಿ ಮುಂದೆ ಸಾಗಿದ್ದರು ತೋಟದ ದಾರಿ ಮದ್ಯ ಸಾಗುತ್ತಿರುವಾಗ ಏಕಾಏಕಿ ಇರ್ವರು ಹಿಂದಿನಿಂದ ಹಲ್ಲೆ ನಡೆಸಿ, ಮಾರಕ ಆಯುಧ ತೋರಿಸಿ ಹಗ್ಗದಿಂದ ಕಟ್ಟಿಹಾಕಿ ಬಾಯಿಗೆ ಪ್ಲಾಸ್ಟರ್ ಅಂಟಿಸಿ 5.18 ಸಾವಿರ ಹಣವನ್ನು ದರೋಡೆ ಗೈದು ಪರಾರಿಯಾಗಿರುವ ಬಗ್ಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಲ್ಲೆಯಿಂದ ತೀವ್ರ ನಿಂತ್ರಣಗೊಂಡಿದ್ದ ವಿಜಯ್‍ಕುಮಾರ್ ಅವರಿಗೆ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯದಲ್ಲಿ ಚಿಕಿತ್ಸೆ ನೀಡಲಾಯಿತು.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್, ಉಪ ವಿಭಾಗ ಡಿವೈಎಸ್‍ಪಿ ಶೈಲೇಂದ್ರ, ಸರ್ಕಲ್ ಇನ್ಸ್‍ಪೆಕ್ಟರ್ ಎಂ.ಮಹೇಶ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಂಟಿಕೊಪ್ಪ ಪೋಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು ಬಿರುಸಿನ ತನಿಖೆ ಕೈಗೊಂಡಿದ್ದಾರೆ.