ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗಾಗಿ ಫೋನ್-ಇನ್ ಕಾರ್ಯಕ್ರಮ : 9480695260 ಗೆ ಕರೆ ಮಾಡಿ

ಮಡಿಕೇರಿ ಮೇ.2 : ಕೋವಿಡ್-19 ಸಂಬಂಧ ಲಾಕ್‍ಡೌನ್ ಹಿನ್ನೆಲೆ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯು ಮುಂದೂಡಲ್ಪಟ್ಟಿದೆ. ವಿದ್ಯಾರ್ಥಿಗಳು ಮನೆಯಲ್ಲಿಯೆ ತಮ್ಮ ಪರೀಕ್ಷಾ ತಯಾರಿಯನ್ನು ಮುಂದುವರೆಸಿತ್ತಾರೆ. ಇದಕ್ಕೆ ಪೂರಕವಾಗಿ ಮುಖ್ಯಶಿಕ್ಷಕರು/ಶಿಕ್ಷಕರು ಮಕ್ಕಳಿಗೆ ಅಗತ್ಯವಾದ ಮಾರ್ಗದರ್ಶನವನ್ನು ದೂರವಾಣಿಯ ಮುಖಾಂತರ ನೀಡುವುದರ ಮೂಲಕ ಮಕ್ಕಳ ಕಲಿಕೆಯನ್ನು ಅನುಪಾಲನೆ ಮಾಡುತ್ತಿದ್ದಾರೆ. ಮಕ್ಕಳಲ್ಲಿ ಇರಬಹುದಾದ ವಿಷಯಕ್ಕೆ ಸಂಬಂದಿಸಿದ ಅನುಮಾನಗಳನ್ನು ಪರಿಹರಿಸಲು ನೇರ ಪೋನ್‍ಇನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮೇ 4 ರಿಂದ ಈ ಕೆಳಕಂಡ ದಿನಾಂಕಗಳಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನೇರ ಫೋನ್ ಇನ್ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿಷಯವಾರು ಪರಿಣಿತ ಶಿಕ್ಷಕರಿಂದ ಮಕ್ಕಳು ತಮ್ಮ ಸಂದೇಹಗಳಿಗೆ ಉತ್ತರವನ್ನು ಪಡೆಯಬಹುದಾಗಿದೆ.
ಮೇ 4 ರಂದು ಕನ್ನಡ ವಿಷಯದ ಬಗ್ಗೆ, ಮೇ 5 ರಂದು ಗಣಿತ, ಮೇ 6 ರಂದು ಸಮಾಜ ವಿಜ್ಞಾನ, ಮೇ 7 ರಂದು ಇಂಗ್ಲೀಷ್, ಮೇ 8 ರಂದು ವಿಜ್ಞಾನ, ಮೇ 9 ರಂದು ಹಿಂದಿ ವಿಷಯವಾಗಿ ಫೋನ್ ಇನ್ ಕಾರ್ಯಕ್ರಮ ನಡೆಯಲಿದೆ. ವಿದ್ಯಾರ್ಥಿಗಳು ದೂರವಾಣಿ ಸಂಖ್ಯೆ: 08272-225664 ಅಥವಾ 9480695260 ಗೆ ಹೆಚ್ಚಿನ ಸಂಖ್ಯೆಯಲ್ಲಿ ಕರೆಮಾಡಿ ಈ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಅವರು ತಿಳಿಸಿದ್ದಾರೆ.