ಮೇ 5 ರಂದು ಬಾಳೆಲೆ, ನಿಟ್ಟೂರು, ಬೆಟ್ಟಗೇರಿ, ಅತ್ತೂರು ಭಾಗದಲ್ಲಿ ವಿದ್ಯುತ್ ವ್ಯತ್ಯಯ

02/05/2020

ಮಡಿಕೇರಿ ಮೇ.2 : 66/11ಕೆವಿ ಮಡಿಕೇರಿ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಎಫ್2 ಬಾಳೆಲೆ, ಎಫ್6 ಹುದಿಕೇರಿ, ಎಫ್9 ಹಾತೂರು ಮತ್ತು ಎಫ್5 ಪಾಲಿಬೆಟ್ಟ ಫೀಡರ್‍ನಲ್ಲಿ ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ನಿರ್ವಹಿಸಬೇಕಾಗಿದೆ. ಮೇ 5 ರಂದು ಬೆಳಿಗ್ಗೆ 09.30ರಿಂದ ಸಂಜೆ 4 ಗಂಟೆಯ ವರೆಗೆ ವಿದ್ಯುತ್ ಉಪಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಬಾಳೆಲೆ, ನಿಟ್ಟೂರು, ರಾಜಪುರ, ಕೋಣಗೇರಿ, ಹುದಿಕೇರಿ, ಹೈಸೂಡ್ಲೂರು ಹಾತ್ತೂರು, ಕಳತ್ತೋಡು ಬೈಗೋಡು. ಕುಂದಾ ಹೊಸೂರು, ಬೆಟ್ಟಗೇರಿ, ಅತ್ತೂರು, ಹಾಗೂ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ಈ ಮೇಲೆ ತಿಳಿಸಿರುವ ಸಮಯದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್‍ನ ಮಡಿಕೇರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಕೋರಿದ್ದಾರೆ.