ಕೊರೋನಾ ವಾರಿಯರ್ಸ್‍ಗೆ ಮಡಿಕೇರಿಯಲ್ಲಿ ನಿವೃತ್ತ ಸೇನಾಧಿಕಾರಿಯಿಂದ ಗೌರವ
03/05/2020

ಮಡಿಕೇರಿ ಮೇ 3 : ಕೊರೋನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಮುನ್ನೆಲೆಯ ಕಾರ್ಯಕರ್ತರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್, ವೈದ್ಯಕೀಯ ಇಲಾಖೆ ಮತ್ತು ಇತರೆ ಕಾರ್ಯಕರ್ತರಿಗೆ ಸೇನೆಗಳ ಪರವಾಗಿ ಮಡಿಕೇರಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದ ಹುತಾತ್ಮರ ಸ್ಮಾರಕದಲ್ಲಿ ನಿವೃತ್ತ ಏರ್ ಮಾರ್ಷಲ್ ನಂದಾ ಕಾರ್ಯಪ್ಪರವರು ವಂದನೆಯನ್ನು ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಕೋರೋನಾ ವಿರುದ್ದ ಕಾರ್ಯ ನಿರ್ವಹಿಸಿ ಮೃತರಾದವರಿಗೂ ಏರ್ ಮಾರ್ಷಲ್ ನಂದಾ ಕಾರ್ಯಪ್ಪ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪನ್ನೇಕರ್ ಅವರು ಹೂ ಗುಚ್ಛವನ್ನು ಅರ್ಪಿಸುವ ಮೂಲಕ ಶಾಂತಿ ಕೋರಿದರು.