ಮಡಿಕೇರಿ ಕಲಾನಗರ ಸಾಂಸ್ಕøತಿಕ ಕಲಾ ವೇದಿಕೆಯಿಂದ ಸ್ವಚ್ಛತಾ ಶ್ರಮದಾನ
03/05/2020

ಮಡಿಕೇರಿ ಮೇ 3 : ನಗರದ ಶ್ರೀರಾಘವೇಂದ್ರ ದೇವಾಲಯ ಸಮೀಪದ ಕಲಾನಗರ ಸಾಂಸ್ಕøತಿಕ ಕಲಾ ವೇದಿಕೆ ವತಿಯಿಂದ ಕಾರ್ಮಿಕ ದಿನಾಚರಣೆಯ ಪ್ರಯುಕ್ತ ವಿವಿಧ ಬಡಾವಣೆಗಳಲ್ಲಿ ಸ್ವಚ್ಛತಾ ಶ್ರಮದಾನ ಮತ್ತು ಸೊಳ್ಳೆ ನಾಶಕ ಸಿಂಪಡಿಸುವ ಕಾರ್ಯ ನಡೆಯಿತು.
ಎರಡು ದಿನಗಳ ಕಾಲ ವಾರ್ಡ್ ಸಂಖ್ಯೆ 23 ರ ಮೈಸೂರು ರಸ್ತೆ, ಪೊಲೀಸ್ ವಸತಿ ಗೃಹ, ಅರಣ್ಯ ಇಲಾಖೆ ಬಂಗಲೆ, ರಾಘವೇಂದ್ರ ದೇವಾಲಯ, ಚೈನ್ ಗೇಟ್ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಸ್ವಚ್ಛಾತಾ ಕಾರ್ಯ ನಡೆಸಲಾಯಿತು. ಚರಂಡಿಯಲ್ಲಿ ತುಂಬಿದ್ದ ಕಾಡು ಮತ್ತು ಕಸವನ್ನು ತೆಗೆಯಲಾಯಿತು. ಮುಂತಾದೆಡೆ ಸೊಳ್ಳೆ ನಾಶಕವನ್ನು ಸಿಂಪಡಿಸಿ ಚರಂಡಿಗಳನ್ನು ಸ್ವಚ್ಛಗೊಳಿಸಲಾಯಿತು. ಕೊರೋನಾ ವೈರಸ್ ಸೇರಿದಂತೆ ಇನ್ನಿತರ ರೋಗಗಳು ಹರಡದಂತೆ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸ್ಥಳೀಯ ನಿವಾಸಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಕೂಡ ಅಧ್ಯಕ್ಷರು ಹಾಗೂ ಸದಸ್ಯರು ಮಾಡಿದರು. ಕಲಾ ವೇದಿಕೆಯ 25 ಕ್ಕೂ ಹೆಚ್ಚು ಸದಸ್ಯರು ಸ್ವಯಂ ಸೇವಕರಾಗಿ ದುಡಿದರು.