135 ಯೋಧರಿಗೆ ಕೊರೋನಾ ಸೋಂಕು

04/05/2020

ನವದೆಹಲಿ ಮೇ 3 : ಕೊರೋನಾ ಮಹಾಮಾರಿ ಭಾರತೀಯ ಯೋಧರಿಗೂ ವಕ್ಕರಿಸಿದ್ದು 135 ಯೋಧರು ಕೊರೋನಾಗೆ ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿನ ಸಿಆರ್‍ಪಿಎಫ್ ಹೆಡ್ ಕ್ವಾಟರ್ಸ್ ಅನ್ನು ಸೀಲ್ ಡೌನ್ ಮಾಡಲಾಗಿದೆ.
ಬಿಎಸ್‍ಎಫ್ 126 ಬೆಟಾಲಿಯನ್ ಹಾಗೂ 178 ಬೆಟಾಲಿಯನ್ ಪಡೆಯ 15 ಮಂದಿ ಯೋಧರಲ್ಲಿ ವೈರಸ್ ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 135ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಹೆಡ್ ಕ್ವಾಟರ್ಸ್ ಅನ್ನು ಸೀಲ್ ಡೌನ್ ಮಾಡಲಾಗಿದೆ.
ವಿಶೇಷ ಮಹಾನಿರ್ದೇಶಕ ಶ್ರೇಣಿಯ ಅಧಿಕಾರಿ, ಡೆಪ್ಯೂಟಿ ಇನ್ಸ್‍ಪೆಕ್ಟರ್ ಜನರಲ್ ಸೇರಿದಂತೆ 40ಕ್ಕೂ ಹೆಚ್ಚು ಅಧಿಕಾರಿಗಳು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.