ಕೊರೋನಾ ವಾರಿಯರ್ಸ್‍ಗೆ ಸೇನೆ ಸಲಾಂ

04/05/2020

ನವದೆಹಲಿ ಮೇ 3 : ದೇಶದಲ್ಲಿ ರಣಕೇಕೆ ಹಾಕುತ್ತಿರುವ ಕೊರೋನಾ ವಿರುದ್ಧ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದಿಟ್ಟ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್’ಗೆ ಭಾರತೀಯ ಸೇನೆ ಭಾನುವಾರ ವಿಶೇಷ ಗೌರವ ಸಲ್ಲಿಸಿದೆ.
ಹೆಲಿಕಾಪ್ಟರ್ ಮೂಲಕ ಕೊರೋನಾ ವಾರಿಯರ್ಸ್ ಗಳ ಮೇಲೆ ಹೂಮಳೆ ಸುರಿಸುವ ಮೂಲಕ ಸೇನೆ ಗೌರವ ಸಲ್ಲಿಸಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಸಿಬ್ಬಂದಿಗಳೂ ಕೂಡ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಭಾರತೀಯ ವಾಯುಸೇನೆಯ ವಿಮಾನಗಳು ಸಂಚರಿಸುವ ಮೂಲಕ ಕೊರೋನಾ ವಾರಿಯರ್ಸ್’ಗಳಿಗೆ ಗೌರವ ಸೂಚಿಸಿದೆ.
ಕಳೆದ ಎರಡು ತಿಂಗಳುಗಳಿಂದ ಹಗಲು ರಾತ್ರಿ ಎನ್ನದೆ ವೈದ್ಯರು, ಆರೋಗ್ಯ ಸಿಬ್ಬಂದಿಗಳು, ಪೊಲೀಸರು, ಪೌರಕಾರ್ಮಿಕರು, ಮಾಧ್ಯಮ ಪತ್ರಕರ್ತರು ಸೇರಿದಂತೆ ಹಲವು ಸಂಖ್ಯೆಯ ಸ್ವಯಂ ಸೇವಕರು ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ತಮ್ಮ ಕುಟುಂಬ ಹಾಗೂ ಸಂಸಾರದಿಂದ ದೂರ ಉಳಿದು ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದರೆ. ಇವರೆಲ್ಲರೂ ಈ ಗೌರವಕ್ಕೆ ಅರ್ಹರಾಗಿದ್ದಾರೆ.