ಸೋಂಕಿತರ ಸಂಖ್ಯೆ 614ಕ್ಕೆ ಏರಿಕೆ

04/05/2020

ಬೆಂಗಳೂರು ಮೇ 3 : ರಾಜ್ಯದಲ್ಲಿ ಇಂದು 13 ಹೊಸ ಕೊರೋನಾವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಈವರೆಗಿನ ಒಟ್ಟಾರೇ ಸೋಂಕಿತರ ಸಂಖ್ಯೆ 614ಕ್ಕೆ ಏರಿಕೆ ಆಗಿದೆ. 25 ಮಂದಿ ಮೃತಪಟ್ಟಿದ್ದು 293 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ ನೀಡಲಾಗಿದೆ.
ಕಲಬುರಗಿಯಲ್ಲಿ ಆರು, ಬೆಂಗಳೂರು ನಗರ ಜಿಲ್ಲೆಯಲ್ಲಿ 4 ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಮೂರು ಪ್ರಕರಣಗಳು ಇಂದು ಪತ್ತೆಯಾಗಿವೆ.
602ನೇ ರೋಗಿ ಕಲಬುರಗಿಯ 13 ವರ್ಷದ ಬಾಲಕಿಯಾಗಿದ್ದು, 532 ನೇ ರೋಗಿಯೊಂದಿಗೆ ಸಂಪರ್ಕ ಹೊಂದಿದ್ದಾರೆ. 603ನೇ ರೋಗಿ ಕಲಬುರಗಿಯ 54 ವರ್ಷದ ಪುರುಷನಾಗಿದ್ದು, 532 ರೋಗಿಯೊಂದಿಗೆ ಸಂಪರ್ಕ ಹೊಂದಿದ್ದವರಾಗಿದ್ದಾರೆ. 604ನೇ ರೋಗಿ ಕಲಬುರಗಿಯವರಾಗಿದ್ದು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. 605, 606ನೇ ರೋಗಿ ಬಾಗಲಕೋಟೆ ಜಿಲ್ಲೆಯ ಮುದೋಳದವರಾಗಿದ್ದಾರೆ. 607ನೇ ರೋಗಿ ಬಾದಾಮಿಯ ಮಹಿಳೆಯಾಗಿದ್ದಾರೆ.