ಒಂದೇ ದಿನ 21 ಪ್ರಕರಣ ಪಾಸಿಟಿವ್

04/05/2020

ದಾವಣೆಗೆರೆ ಮೇ 3 : ವಾರದ ಹಿಂದಷ್ಟೇ ಹಸಿರು ವಲಯದಲ್ಲಿದ್ದ ದಾವಣಗೆರೆ ಜಿಲ್ಲೆಯಲ್ಲಿ ಇಂದು ಒಂದೇ ದಿನ 21 ಕೊರೋನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ.
ನಿನ್ನೆ 10 ಪ್ರಕರಣಗಳು ಕಂಡುಬಂದಿದ್ದ ದಾವಣಗೆರೆಯಲ್ಲಿ ಇಂದು 21 ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಜಿಲ್ಲೆಯಲ್ಲಿ ಒಟ್ಟಾರೇ ಸೋಂಕಿತರ ಸಂಖ್ಯೆ 31ಕ್ಕೆ ಏರಿಕೆ ಆಗಿದೆ. ಈ ಮೂಲಕ ದಾವಣೆಗೆರೆ ಕೆಂಪು ವಲಯದತ್ತ ಸಾಗುತ್ತಿದೆ.
ಮೊನ್ನೆ 94, ನಿನ್ನೆ 72 ಇಂದು 164 ಒಟ್ಟಾರೇ 330 ಜನರ ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಈ ಪೈಕಿ 37 ಜನರ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 21 ಮಂದಿಯಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ ಹರಿಹರಕ್ಕೂ ಕೊರೋನಾ ವೈರಸ್ ಸೋಂಕು ಹರಡಿರುವ ಸಾಧ್ಯತೆ ಇದೆ ಎಂಬುದು ತಿಳಿದುಬಂದಿದೆ.ರಾಜ್ಯದಲ್ಲಿ ಇಂದು 13 ಹೊಸ ಕೊರೋನಾವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ದಾವಣಗೆರೆಯಲ್ಲಿ 21 ಪ್ರಕರಣಗಳು ಸೇರಿದಂತೆ ಒಟಾರೇ ಸೋಂಕಿತರ ಸಂಖ್ಯೆ 635ಕ್ಕೆ ಏರಿಕೆ ಆಗಿದೆ.