ಬ್ರಿಟನ್ ಪ್ರಧಾನಿಗೆ ಕಠಿಣ ಸನ್ನಿವೇಶ
04/05/2020

ಲಂಡನ್ ಮೇ 3 : ತಮ್ಮ ಸಾವನ್ನು ಘೋಷಿಸಲು ವೈದ್ಯರು ಸಿದ್ಧತೆ ನಡೆಸಿದ್ದರು ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ತಾವು ಎದುರಿಸಿದ ಕಠಿಣ ಸನ್ನಿವೇಶವನ್ನು ಬಹಿರಂಗಪಡಿಸಿದ್ದಾರೆ.
ಮಹಾಮಾರಿ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದು ಸದ್ಯ ಗುಣಮುಖರಾಗಿರುವ ಬೋರಿಸ್ ಜಾನ್ಸನ್ ಅವರು ನಾನು ಸತ್ತೆ ಹೋಗುತ್ತೆನೆಂದು ವೈದ್ಯರು ಅದನ್ನು ಘೋಷಿಸಲು ಸಿದ್ಧತೆ ನಡೆಸಿದ್ದರು ಎಂದು ಹೇಳಿದ್ದಾರೆ.
ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎಂಬ ಅರಿವಾಗಿದ್ದು ವೈದ್ಯರು ಸಾವಿನ ಘೋಷಣೆಗೆ ಸಿದ್ಧರಾಗಿದ್ದರು ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ. ಅದು ನನಗೆ ಕಠಿಣ ಕ್ಷಣಗಳಾಗಿತ್ತು. ಒಂದು ವೇಳೆ ಪರಿಸ್ಥಿತಿ ಕೈಮೀರಿ ಹೋದರೆ ಏನು ಮಾಡಬೇಕು ಎಂಬುದರ ಬಗ್ಗೆ ವೈದ್ಯರು ಸಿದ್ದತೆಗಳನ್ನು ಮಾಡಿಕೊಂಡಿದ್ದರು ಎಂದು ತಿಳಿಸಿದ್ದಾರೆ.