ವಾಹನಗಳಿಲ್ಲದ ಹೆದ್ದಾರಿಯಲ್ಲಿ ಸ್ವಚ್ಛಂದ ಗಜಪಯಣ

04/05/2020

ಮಡಿಕೇರಿ ಮೇ 4 : ಪ್ರಕೃತಿ ರಮಣೀಯ ಕೊಡಗು ಜಿಲ್ಲೆಯ ಮೂಲಕ ಅನೇಕ ಹೆದ್ದಾರಿಗಳು ಹಾದು ಹೋಗುತ್ತವೆ. ಕೊರೋನಾ ಲಾಕ್ ಡೌನ್ ನಿಂದ ಈ ಮಾರ್ಗಗಳೆಲ್ಲವೂ ವಾಹನಗಳಿಲ್ಲದೆ ಬಿಕೋ ಎನ್ನುತ್ತಿದ್ದು, ಕುಶಾಲನಗರದ ಹೆದ್ದಾರಿಯ ಆನೆಕಾಡು ಪ್ರದೇಶದಲ್ಲಿ ದುಬಾರೆ ಸಾಕಾನೆ ಶಿಬಿರದ ಆನೆಗಳು ಸ್ವಚ್ಛಂದ ಪಯಣದಲ್ಲಿ ತೊಡಗಿವೆ.
ಕಳೆದ ಒಂದು ವಾರಗಳ ಕಾಲ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಹಸಿರು ಚಿಗುರುಗಳು ಹೆಚ್ಚಾಗಿದ್ದು, ಆನೆಗಳಿಗೆ ಆಹಾರ ಯಥೇಚ್ಚವಾಗಿ ದೊರೆಯುತ್ತಿದೆ. ಮಾವುತರ ಅಣತಿಯಂತೆ ಸಾಕಾನೆಗಳ ಸವಾರಿ ಆಕರ್ಷಣೀಯವಾಗಿದೆ.