ಬಿಕೋ ಎನ್ನುತ್ತಿರುವ ಅಸ್ಟ್ರೋಟರ್ಫ್ ಹಾಕಿ ಮೈದಾನ

04/05/2020

ಮಡಿಕೇರಿ ಮೇ 4 : ನಗರದ ನೂತನ ಖಾಸಗಿ ಬಸ್ ನಿಲ್ದಾಣದ ಸಮೀಪವಿರುವ ಸಾಯಿ ಹಾಸ್ಟೇಲ್ ನ ಅಸ್ಟ್ರೋಟರ್ಫ್ ಹಾಕಿ ಮೈದಾನ ಬಿಕೋ ಎನ್ನುತ್ತಿದೆ. ಪ್ರತಿದಿನ ಕ್ರೀಡಾ ವಸತಿ ಶಾಲೆಯ ನೂರಾರು ವಿದ್ಯಾರ್ಥಿಗಳು ಈ ಮೈದಾನದಲ್ಲಿ ಆಟವಾಡುತ್ತಿದ್ದರು. ಆದರೆ ಕೊರೋನಾ ಲಾಕ್ ಡೌನ್ ನಿಂದಾಗಿ ಒಂದೂವರೆ ತಿಂಗಳಿನಿಂದ ಶಾಲೆಯ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿದೆ. ಇತರ ಸಂದರ್ಭಗಳಲ್ಲಿ ರಜೆ ಇದ್ದರೂ ವಿದ್ಯಾರ್ಥಿಗಳು ಈ ಮೈದಾನದಲ್ಲಿ ತರಬೇತಿ ಪಡೆಯುತ್ತಿದ್ದರು. ಆದರೆ ಈಗ ಎಲ್ಲರೂ ಮನೆ ಸೇರಿಕೊಂಡಿದ್ದಾರೆ.