ಇಂದಿರಾ ಕ್ಯಾಂಟೀನ್ ಗೆ ಗ್ರಾಹಕರ ಕೊರತೆ
04/05/2020

ಮಡಿಕೇರಿ ಮೇ 4 : ಅತ್ಯಂತ ರಿಯಾಯಿತಿ ದರದಲ್ಲಿ ಊಟ, ಉಪಹಾರ ನೀಡುವ ಸರ್ಕಾರದ ಅಧೀನದ ಇಂದಿರಾ ಕ್ಯಾಂಟೀನ್ ಲಾಕ್ ಡೌನ್ ನಡುವೆಯೂ ಬಡವರಿಗಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಮಡಿಕೇರಿಯ ಇಂದಿರಾ ಕ್ಯಾಂಟೀನ್ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿದೆ. ಸ್ಥಳದಲ್ಲೇ ಆಹಾರ ಸೇವನೆಗೆ ಅವಕಾಶ ನೀಡಿಲ್ಲ, ಆದರೆ ಪಾರ್ಸೆಲ್ ತೆಗೆದುಕೊಂಡು ಹೋಗಬಹುದಾಗಿದೆ. ದಿನಕ್ಕೆ ನೂರು ಊಟ, ಉಪಹಾರ ಹೋಗುವುದೇ ಕಷ್ಟವಾಗಿದೆ. ಇತರ ಸಂದರ್ಭಗಳಲ್ಲಿ ಸುಮಾರು 300 ಊಟ ಖರ್ಚಾಗುತ್ತಿತ್ತು.