ಆಟೋರಿಕ್ಷಾಗಳ ಸಂಚಾರಕ್ಕೆ ಅವಕಾಶ ನೀಡಿದ ಜಿಲ್ಲಾಡಳಿತ

04/05/2020

ಮಡಿಕೇರಿ ಮೇ 4 : ಹಿಂದಿನಂತೆಯೇ ಭಾನುವಾರ, ಸೋಮವಾರ, ಬುಧವಾರ ಮತ್ತು ಶುಕ್ರವಾರ ಬೆಳಗ್ಗೆ 6 ರಿಂದ ಸಂಜೆ 4 ಗಂಟೆ ವರೆಗೆ ಆಟೋರಿಕ್ಷಾಗಳು ವೈದ್ಯಕೀಯ ತುರ್ತು ಸೇವೆ, ತರಕಾರಿ ಹಾಗೂ ಅಗತ್ಯ ವಸ್ತುಗಳ ಖರೀದಿಗೆ ಸಂಚರಿಸಬಹುದಾಗಿದೆ. ಹಾಗೆಯೇ ಜ್ಯುವೆಲ್ಲರಿ ಮತ್ತು ಲಿಕ್ಕರ್ ಅಂಗಡಿಗಳು ವಾರದ ನಾಲ್ಕು ದಿನದಲ್ಲಿ ತೆರೆಯಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ತಿಳಿಸಿದ್ದಾರೆ. ಪ್ರತಿಯೊಬ್ಬರೂ ಮನೆಯಿಂದ ಹೊರಡುವಾಗ ಮಾಸ್ಕ್ ಧರಿಸುವುದು ಖಡ್ಡಾಯವೆಂದು ಹೇಳಿದ್ದಾರೆ.