ನೆಮ್ಮದಿಯಿಂದ ಇರುವ ಹಾಸನ- ಕೊಡಗು ಗಡಿ

04/05/2020

ಮಡಿಕೇರಿ ಮೇ 4 : ಕೊಡಗು ಕೊರೋನಾ ಮುಕ್ತವಾಗಿದ್ದರೂ ಪಕ್ಕದ ಕೇರಳ ರಾಜ್ಯ ಮತ್ತು ಮೈಸೂರು ಜಿಲ್ಲೆಯಲ್ಲಿ ಸೋಂಕು ವ್ಯಾಪಿಸಿರುವುದರಿಂದ ಸ್ವಲ್ಪ ಆತಂಕವೇ ಇದೆ. ಆದರೆ ಜಿಲ್ಲೆಯಲ್ಲಿ ಒಂದಷ್ಟು ನೆಮ್ಮದಿಯ ಪ್ರದೇಶವೆಂದು ಭಾವಿಸುವುದಾದಲ್ಲಿ ಅದು ಶನಿವಾರಸಂತೆ, ಕೊಡ್ಲಿಪೇಟೆ ವಿಭಾಗಗಳು. ಕಾರಣ, ಇವುಗಳು ಹಸಿರು ವಲಯಕ್ಕೆ ಸೇರಿರುವ ನೆರೆಯ ಹಾಸನ ಜಿಲ್ಲೆಯ ಪಕ್ಕದಲ್ಲೇ ಇದೆ. ಮಡಿಕೇರಿ ತಾಲ್ಲೂಕಿನ ಸಮೀಪದ ದಕ್ಷಿಣ ಕನ್ನಡ ಜಿಲ್ಲೆಯ ಪರಿಸ್ಥಿತಿ ಕೊರೊನಾ ಹಿನ್ನೆಲೆಯಲ್ಲಿ ಉತ್ತಮವಾಗಿಲ್ಲ.