ವಿಶ್ವಕರ್ಮ ಸಮಾಜ ಸೇವಾ ಸಂಘದ ಸದಸ್ಯರುಗಳಿಗೆ ದಿನಸಿ ಕಿಟ್ ವಿತರಣೆ

04/05/2020

ಮಡಿಕೇರಿ ಮೇ 4 : ಕೋವಿಡ್ ಲಾಕ್‍ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಮಡಿಕೇರಿ ತಾಲ್ಲೂಕು ವಿಶ್ವಕರ್ಮ ಸಮಾಜ ಸೇವಾ ಸಂಘದ ಸದಸ್ಯರುಗಳು ಹಾಗೂ ಸಮಾಜ ಬಾಂಧವರಿಗೆ ವಿಶ್ವ ಕರ್ಮ ಸಮಾಜ ಸೇವಾ ಸಂಘ ಮತ್ತು ವಿಶ್ವಕರ್ಮ ಮಹಿಳಾ ಸಮಿತಿ ವತಿಯಿಂದ ಮನೆ ಮನೆಗೆ ಭೇಟಿ ನೀಡಿ ದಿನಸಿ ಕಿಟ್ ವಿತರಿಸಲಾಯಿತು.
ಸಂಘದ ಅಧ್ಯಕ್ಷ ಬಿ.ಸಿ. ಮೋಹನ್ ಆಚಾರ್ಯ, ಕಾರ್ಯದರ್ಶಿ ಇ. ಬಿ. ಪ್ರವೀಣಾ, ಖಾಜಾಂಚಿ ಇ.ಎ. ದೀಕ್ಷಿತ್ ಹಾಗೂ ಸಂಘದ ಪದಾಧಿಕಾರಿಗಳು  ನೂರೈವತ್ತು ಕಿಟ್ ವಿತರಿಸಿದರು.