ಮದ್ಯಕ್ಕಾಗಿ ತಮಿಳುನಾಡಿನಿಂದ ಬಂದರು
05/05/2020

ಬೆಂಗಳೂರು ಮೇ 4 : ರಾಜ್ಯಾದ್ಯಂತ ಮದ್ಯದಂಗಡಿಗಳು ಓಪನ್ ಆಗಿದ್ದು, ಮದ್ಯ ಖರೀದಿಗೆ ಜನರು ಮುಗಿ ಬೀಳುತ್ತಿದ್ದಾರೆ. ಈ ಮಧ್ಯೆ ಎಣ್ಣೆಗಾಗಿ ತಮಿಳುನಾಡಿನಿಂದಲೂ ಮದ್ಯ ಪ್ರಿಯರು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಅತ್ತಿಬೆಲೆಯಲ್ಲಿ ವೈನ್ ಶಾಪ್ ಬಳಿ ಮದ್ಯ ಖರೀದಿಗೆ ಕ್ಯೂನಲ್ಲಿ ನಿಂತಿದ್ದ ತಮಿಳುನಾಡಿನ ಕುಡುಕರ ಮೇಲೆ ಪೊಲೀಸರು ಲಾಠಿ ಚಾರ್ಚ್ ನಡೆಸಿದ್ದಾರೆ.
ಅಂತರ ರಾಜ್ಯಗಳ ನಡುವೆ ಗಡಿ ಬಂದ್ ಆಗಿದ್ದರೂ ತಮಿಳುನಾಡಿನಿಂದ ಮದ್ಯ ಪ್ರಿಯರು ಹೇಗೆ ಕರ್ನಾಟಕಕ್ಕೆ ಬಂದರು, ಅವರನ್ನು ರಾಜ್ಯದೊಳಗೆ ಹೇಗೆ ಬಿಡಲಾಯಿತು ಎಂಬುದು ಇದೀಗ ಯಕ್ಷಪ್ರಶ್ನೆಯಾಗಿದೆ.