ಕಾರ್ಮಿಕ ಇಲಾಖೆಯಿಂದ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ

05/05/2020

ಮಡಿಕೇರಿ ಮೇ 5 : ಮಡಿಕೇರಿ ತಾಲೂಕಿನ ಇಬ್ನಿವಳವಾಡಿ ಹತ್ತಿರದ ಅಶೋಕ ಪ್ಲಾಂಟೇಷನ್ ಪ್ರೈವೇಟ್ ಲಿಮಿಟೆಡ್ ಮತ್ತು ಸಿಂಕೋನಾ ಎಸ್ಟೇಟ್‍ಗಳಲ್ಲಿಯ ಕಾರ್ಮಿಕರಿಗಾಗಿ ಮಾಸ್ಕ್ ಮತ್ತು ಹ್ಯಾಂಡ್ ವಾಸ್ ಸೋಪ್ ವಿತರಿಸಲಾಯಿತು ಹಾಗೂ ಬೋಯಿಕೇರಿ ಹತ್ತಿರದ ಕೌಸ್ತುಬಾ ಎಸ್ಟೇಟ್ ಹಾಗೂ ಹಾಲೇರಿ ಎಸ್ಟೇಟ್ ನ ತೋಟದ ಕೆಲಸದ ಕಾರ್ಮಿಕರಿಗಾಗಿ ಮಾಸ್ಕ್ & ಹ್ಯಾಂಡ್‍ವಾಶ್, ಸೋಪ್ ವಿತರಿಸಿ ಕಾರ್ಮಿಕರಿಗೆ ಕೋವಿಡ್-18ರ ಕುರಿತು ಮಾಹಿತಿಯನ್ನು ನೀಡಲಾಯಿತು ಎಂದು ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎಂ ಯತ್ನಟ್ಟಿ ಅವರು ತಿಳಿಸಿದ್ದಾರೆ.