ಕುಟ್ಟಂಡ ರಂಜನ್ ಕಾರ್ಯಪ್ಪಗೆ ಸುಬೇದಾರ್ ಆಗಿ ಬಡ್ತಿ

05/05/2020

ಮಡಿಕೇರಿ ಮೇ 5: ಊಟಿಯ ವಿಲ್ಲಿಂಗ್‍ಟನ್‍ನ ಭಾರತೀಯ ಭೂ ಸೇನೆಯ ಮದ್ರಾಸ್ ರೆಜಿಮೆಂಟ್ ಕೇಂದ್ರದ ಸೈನಿಕರು ಮತ್ತು ಅಥ್ಲೆಟಿಕ್ ಕೋಚ್ ಆಗಿರುವ ಕುಟ್ಟಂಡ ರಂಜನ್ ಕಾರ್ಯಪ್ಪ ಅವರಿಗೆ ಸುಬೇದಾರ್ ಆಗಿ ಬಡ್ತಿ ದೊರೆತ್ತಿದ್ದು, ಊಟಿಯಲ್ಲಿಯೇ ಸೇವೆ ಮುಂದುವರೆಸಿದ್ದಾರೆ. ಕುಟ್ಟಂಡ ರಂಜನ್ ಕಾರ್ಯಪ್ಪ ಅವರು ಕೊಡಗು ಜಿಲ್ಲೆಯ ಮಾದಾಪುರದ ಹಾಡಗೇರಿ ಗ್ರಾಮದ ಲೇಟ್ ಕಾರ್ಯಪ್ಪ ಮತ್ತು ಕಸ್ತೂರಿ ದಂಪತಿಯ ಪುತ್ರರಾಗಿದ್ದಾರೆ.