ಆನ್‍ಲೈನ್ ಮೂಲಕ ಪಾಸ್ ಪಡೆಯಲು ಅವಕಾಶ

05/05/2020

ಮಡಿಕೇರಿ ಮೇ 4 : ಪ್ರಯಾಣಕ್ಕೆ ಅನುಮತಿ ಪಡೆಯಲು ತೀವ್ರ ಜನಸಂದಣಿ ಉಂಟಾಗುತ್ತಿರುವುದರಿಂದ ಮತ್ತು ಸಾರ್ವಜನಿಕರು ಪೆÇಲೀಸ್ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಆನ್‍ಲೈನ್ ಮೂಲಕ ಪಾಸ್ ವಿತರಿಸಲಾಗುತ್ತಿದೆ. ಆನ್‍ಲೈನ್ ಪಾಸ್ ಪಡೆಯಲು ಅಂತರ್ಜಾಲ ತಾಣ: https://kspclearpass.idp.mygate.com ಗೆ ಭೇಟಿ ನೀಡಿ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಲು ಕೋರಲಾಗಿದೆ.
ಕೋವಿಡ್-19 ರ ಸಂಬಂಧ ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ಸಿಲುಕಿರುವ ಯಾತ್ರಿಗಳು, ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಇತರೆ ಜನರು ಅವರ ಸ್ವಂತ ಊರುಗಳಿಗೆ ತೆರಳಲು ಮೇ 4 ರಿಂದ ಅನ್ವಯವಾಗುವಂತೆ ಮುಂದಿನ ಎರಡು ವಾರಗಳವರೆಗೆ ಕೇವಲ ಒಂದು ಬಾರಿ ಪ್ರಯಾಣಕ್ಕೆ ಮಾತ್ರ (One time passss) ಅನುಮತಿ ನೀಡುವಂತೆ ಸರ್ಕಾರದ ಆದೇಶವಾಗಿತ್ತು.
ಆದ್ದರಿಂದ ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ಸಿಲುಕಿರುವ ಕೊಡಗು ಜಿಲ್ಲೆಯ ಜನರು ಅವರ ಸ್ವಂತ ಊರುಗಳಿಗೆ ಬರಲು ಮತ್ತು ಕೊಡಗು ಜಿಲ್ಲೆಯಲ್ಲಿ ಸಿಲುಕಿರುವ ಜನರು ತಮ್ಮ ಸ್ವಂತ ಊರುಗಳಿಗೆ ತೆರಳಲು ತಾವು ಸಿಲುಕಿರುವ ಜಿಲ್ಲೆ/ ವಿಭಾಗದ ಜಿಲ್ಲಾಧಿಕಾರಿ/ ಆರಕ್ಷಕ ಉಪ ಅಧೀಕ್ಷಕರನ್ನು ಸಂಪರ್ಕಿಸಿ ಒಂದು ಬಾರಿಯ ಪ್ರಯಾಣಕ್ಕೆ ಅನುಮತಿ ಪಡೆದು ಪ್ರಯಾಣಿಸಲು ಕೋರಲಾಗಿತ್ತು.